ಗೋವಾದಲ್ಲಿ ಹುಣಸೂರು ಮಕ್ಕಳ ಸಾಧನೆ

HUN-FEB-26-1(LA SALETE SCHOOL DANCE STUDENTS)
ಹುಣಸೂರು ತಾಲೂಕು ಲಾ ಸಲೇಟ್ ವಿದ್ಯಾನಿಕೇತನದ ವಿದ್ಯಾರ್ಥಿಗಳು ಗೋವಾದಲ್ಲಿ ಆಯೋಜನೆಗೊಂಡಿದ್ದ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕಗಳೊಂದಿಗೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದೀಕ್ಷಾ, ಖುಷಿ, ಜ್ಞಾನೇಶ್ವರಿ, ಸಮೃದ್ಧಿ ಇತರರಿದ್ದಾರೆ.
Published on

ಹುಣಸೂರು: ಗೋವಾ ರಾಜ್ಯದ ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಜಾನಪದ ಮತ್ತು ಪಾಶ್ಚಿಮಾತ್ಯ ವಿಭಾಗಗಳ ಜೋಡಿ ಸ್ಪರ್ಧೆ ಮತ್ತು ಗುಂಪುಸ್ಪರ್ಧೆಯಲ್ಲಿ ಹುಣಸೂರಿನ ಲಾಸಲೇಟ್ ವಿದ್ಯಾನಿಕೇತನದ ವಿದ್ಯಾರ್ಥಿಗಳು 4 ಚಿನ್ನದ ಪದಕ ಗಳಿಸುವ ಮೂಲಕ 2025ನೇ ಸಾಲಿನ ರನ್ನರ್ ಅಪ್ ಚಾಂಪಿಯನ್‌ಷಿಪ್ ಮುಡಿಗೇರಿಸಿಕೊಂಡರು. ಆ ಮೂಲಕ ನೇಪಾಳದಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.

ಹುಣಸೂರಿನ ಕಾವೇರಿ ಎಕ್ಸ್‌ಪ್ರೆಸ್ ಡಾನ್ಸ್ ಅಕಾಡೆಮಿಯಿಂದ ತರಬೇತುಗೊಂಡ ವಿದ್ಯಾರ್ಥಿಗಳು ಗೋವಾದಲ್ಲಿ ಯಶಸ್ವಿ ಪ್ರದರ್ಶನ ನೀಡಿದರು. ಜಾನಪದ ನೃತ್ಯದ(ಜೂನಿಯರ್)ಜೋಡಿ ವಿಭಾಗದಲ್ಲಿ ದೀಕ್ಷಾ ಮತ್ತು ಪ್ರತೀಕ್ಷಾ ಜೋಡಿ ಚಿನ್ನದ ಪದಕಗಳನ್ನು ಗಳಿಸಿದರು. ದೀಕ್ಷಾ ಮತ್ತವರ ತಂಡ ಗುಂಪು ವಿಭಾಗದಲ್ಲಿ ಚಿನ್ನದ ಪದಕವನ್ನು ಬಾಚಿಕೊಂಡಿತು.

ಪಾಶ್ಚಿಮಾತ್ಯ ನೃತ್ಯದ ಗುಂಪು ವಿಭಾಗದಲ್ಲಿ ಖುಷಿ ಮತ್ತವರ ತಂಡ ಚಿನ್ನದ ಪದಕ ಗಳಿಸಿದರೆ, ಜೋಡಿ ವಿಭಾಗದಲ್ಲಿ ಜ್ಞಾನೇಶ್ವರಿ ಮತ್ತು ಸಮೃದ್ಧಿ ಚಿನ್ನದ ಪದಕ ಗಳಿಸುವಲ್ಲಿ ಯಶಸ್ವಿಯಾಯಿತು. ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಮತ್ತು ತರಬೇತುದಾರ ಮಹದೇವಸ್ವಾಮಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net