

ಹುಬ್ಬಳ್ಳಿ: ದೆಹಲಿಯ ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟಿ ಆಶ್ರಯದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕ್ರಿಶ್ಚಿಯನ್ ಯೂನಿವರ್ಸಿಟಿಯಲ್ಲಿ ಏರ್ಪಡಿಸಿದ್ದ 38ನೇ ಎಐಯು ಅಂತರ ವಿಶ್ವವಿದ್ಯಾಲಯದ ಆಗ್ನೇಯ ವಲಯ ಯುವಜನೋತ್ಸವದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
ವಿವಿ ವ್ಯಾಪ್ತಿಯ ಧಾರವಾಡ ಜಿಲ್ಲೆಯ ಕಿಟಲ್ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಡಾ. ಪ್ರಕಾಶ ಮಲ್ಲಿಗವಾಡ ಮಾರ್ಗದರ್ಶನದಲ್ಲಿ ಜನಪದ ನೃತ್ಯ ಸಂಶೋಧನಾ ಸಂಪನ್ಮೂಲ ವ್ಯಕ್ತಿಗಳಾದ ಸಾಲಿಯಾನ್ ಸಂತೋಷ್ ಹಾಗೂ ಸ್ಟಿಫನ್ ಲುಂಜಾಲ್ ಸಂಯೋಜನೆ ಮಾಡಿದ ಜನಪದ ವಾದ್ಯಗಾರಿಕೆ ತರಬೇತಿ ನೀಡಲಾಗಿತ್ತು.
ಪ್ರದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಸಾಲಿಯಾನ್ ಸಂತೋಷ, ಸ್ಟಿಫನ್ ಲುಂಜಾಲ್, ಆಕಾಶ, ವಿಕಾಸ ಆರ್., ಚೇತನ ಶಂಕರ ಲಮಾಣಿ, ರಾಬರ್ಟ್ ಸಿ., ಬೈಲಪ್ಪ, ಪ್ರದೀಪ ಶಿವಪ್ಪ ಐಹೊಳಿ, ರೂಪ ಪ್ರಕಾಶ ಮುತ್ತಗಿ, ಚನ್ನಬಸವ, ವಿಶಾಲ ಬೂದಿಹಾಳ, ಮಲ್ಲೇಶಿ, ಶರಣಬಸವ ಅವರನ್ನು ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕಿಟಲ್ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ ರೇಖಾ ಜೋಗಳರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.