ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳ ಸಾಧನೆ

bcm
bcm
Published on

ಹೆಬ್ರಿ: ಹೆಬ್ರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಸಿಕ್ಕ ಅವಕಾಶ ಸ ದುಪಯೋಗಪಡಿಸಿಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಕೊಪ್ಪಳ ಜಿಲ್ಲೆಯ ಮುತ್ತಪ್ಪ ಹಾಗೂ ಲಲಿತವ್ವ ಎಂಬುವರ ಪುತ್ರಿ ಅಕ್ಷತಾ ಶಾಂತಗೇರಿ ಬಡತನವನ್ನು ಮೀರಿ ವಿಜ್ಞಾನ ವಿಭಾಗದಲ್ಲಿ 537 ಅಂಕಗಳೊಂದಿಗೆ ಶೇ.89.5 ಪಡೆದಿದ್ದಾರೆ. ಚಿಕ್ಕಮಗಳೂರಿನ ಶ್ರಾವಣ್ಯಾ ಪಿ. ಕಲಾ ವಿಭಾಗದಲ್ಲಿ 528 (ಶೇ.88) ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ನಿರಂತರವಾಗಿ ‘ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ’ವನ್ನು ಓದಿದ ಪರಿಣಾಮ ಉತ್ತಮ ಅಂಕ ಬಂದಿದೆ ಎಂದು ವಿಜಯವಾಣಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನನಗೆ ವಿದ್ಯಾರ್ಥಿನಿಲಯದಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಸಿಕ್ಕಿದ್ದು ತುಂಬಾ ಸಹಕಾರ ಆಯಿತು. ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ನನ್ನ ಪರೀಕ್ಷೆಯ ತಯಾರಿಗೆ ಬಹಳಷ್ಟು ಕೊಡುಗೆ ನೀಡಿದೆ. ಮೇಲ್ವಿಚಾರಕಿ ಜಯಂತಿ ನೀಡಿದ ಸಹಕಾರ ಎಂದಿಗೂ ಮರೆಯಲಾರೆ. ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ಉತ್ತಮ ಅವಕಾಶಗಳಿದ್ದವು, ಸದುಪಯೋಗಪಡಿಸಿಕೊಂಡಿದ್ದೇನೆ. ಅಕ್ಷತಾ ಶಾಂತಗೇರಿ, ವಿಜ್ಞಾನ ವಿಭಾಗದ ವಿದ್ಯಾರ್ಥಿ https://www.vijayavani.net/lets-solve-the-parking-problem https://www.vijayavani.net/direct-connection-of-sewage-to-the-sewer

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net