

ವಿಜಯಪುರ: ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಳೆದ ವರ್ಷ ನವೆಂಬರ್&ಡಿಸೆಂಬರ್ ತಿಂಗಳಿನಲ್ಲಿ ನಡೆಸಿದ ಪರೀೆಯಲ್ಲಿ ನಗರದ ಬಿಎಲ್ಡಿಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧ (ಫಾರ್ಮಸಿ) ಮಹಾವಿದ್ಯಾಲಯದ ಐದು ಜನ ವಿದ್ಯಾರ್ಥಿಗಳು ಸ್ನಾತಕೋತ್ತರ ಮತ್ತು ನಾಲ್ಕು ಜನ ವಿದ್ಯಾರ್ಥಿಗಳು ಪದವಿ ವಿಭಾಗಗಳಲ್ಲಿ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸ್ನಾತಕೋತ್ತರ ಎಂ. ಫಾರ್ಮಾ ಪರೀೆಯಲ್ಲಿ ವಿವಿಧ ವಿಷಯಗಳ ಒಟ್ಟು 2325 ಅಂಕಗಳಿಗೆ ಪರೀೆ ನಡೆದಿತ್ತು. ಎಂ. ಫಾರ್ಮಾ ಕೆಮೆಸ್ಟ್ರಿ ವಿಭಾಗದಲ್ಲಿ ಹಣಮಂತ ಸಣ್ಣಕ್ಕಿ 3ನೇ ರ್ಯಾಂಕ್ (2090 ಅಂಕ), ಎಂ. ಫಾರ್ಮಾ ಕ್ವಾಲಿಟಿ ಅಶೂರನ್ಸ್ ವಿಭಾಗದಲ್ಲಿ ಜಗದೇವಿ 7ನೇ ರ್ಯಾಂಕ್ (2033 ಅಂಕ), ಎಂ. ಫಾರ್ಮಾ ಫಾರ್ಮಸಿ ಪ್ರಾಕ್ಟಿಸ್ ವಿಭಾಗದಲ್ಲಿ ಪ್ರಜ್ವಲ ಮಠ 3ನೇ ರ್ಯಾಂಕ್ (2005 ಅಂಕ), ಮಲ್ಲಿಕಾರ್ಜುನ ಇರಣಿ 7ನೇ ರ್ಯಾಂಕ್ (1930 ಅಂಕ) ಹಾಗೂ ಮುರುಗೇಶ ದೇವೂರ 10ನೇ ರ್ಯಾಂಕ್ (1897 ಅಂಕ) ಪಡೆದುಕೊಂಡಿದ್ದಾರೆ.
ಬಿ. ಫಾರ್ಮಾ ವಿಭಾಗದಲ್ಲಿ 1ನೇ ಸೆಮಿಸ್ಟರ್ನಲ್ಲಿ ವಿನಯ ಸಿ.ಎಂ., ಒಟ್ಟು 675 ಅಂಕಗಳ ಪೈಕಿ 583 ಅಂಕ ಪಡೆದು 5ನೇ ರ್ಯಾಂಕ್ ಗಳಿಸಿದ್ದಾರೆ. 2ನೇ ಸೆಮಿಸ್ಟರ್ ಒಟ್ಟು 725 ಅಂಕಗಳ ಪಟ್ಟಿ ಅಶ್ವಿನಿ ಪಾಶ್ಚಾಪುರ 3ನೇ ರ್ಯಾಂಕ್ (648 ಅಂಕ), ದೀಪಾಲಿ ಬೀಸೆ ಮತ್ತು ಸ್ಮೀತಾ ಅಂಗಡಗೇರಿ ಇಬ್ಬರೂ 10ನೇ ರ್ಯಾಂಕ್ (ತಲಾ 633 ಅಂಕ) ಪಡೆದಿದ್ದಾರೆ. ಅಲ್ಲದೆ, ಕಾಲೇಜಿನ 142 ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಹಲವು ರ್ಯಾಂಕ್ಗಳು ಲಭಿಸಿವೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯ ಎಂ.ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಶೆಟ್ಟಿ ಮಾಹಿತಿ ನೀಡಿದ್ದಾರೆ.