ವಿವಿಧ ಕೃಷಿ ಕ್ಷೇತ್ರದ ಸಾಧಕರಿಗೆ ಸನ್ಮಾನ

46
Published on

ಮೈಸೂರು: ಭಾರತೀಯ ಕಿಸಾನ್ ಸಂಘದ ನಂಜನಗೂಡು ತಾಲೂ ಘಟಕ ಹಾಗೂ ಹೊಸಕೋಟೆ ಗ್ರಾಮ ಘಟಕದಿಂದ ರೈತ ದಿನಾಚರಣೆ ಅಂಗವಾಗಿ ಹೊಸಕೋಟೆ ಗ್ರಾಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನಿಸಲಾಯಿತು.

ಹೊಸಕೋಟೆ ಸಿದ್ದಪ್ಪ, ದೇವನೂರು ನಾಗೇಂದ್ರ, ಬಸವಟ್ಟಿಗೆ ಪ್ರಭುಸ್ವಾಮಿ ಅವರನ್ನು ಮುಖಂಡ ಕೆರೆಹಳ್ಳಿ ಬಿ.ದೊರೆಸ್ವಾಮಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿದ ಬಸವಟ್ಟಿಗೆ ಪ್ರಭುಸ್ವಾಮಿ ಮಾತನಾಡಿ, ದೇಶದ ಬೆನ್ನೇಲುಬಾದ ರೈತರು, ಬ್ಯಾಂಕ್‌ನಲ್ಲಿ ಸಾಲ ಪಡೆದು ವ್ಯವಸಾಯ ಮಾಡಿ ಕಷ್ಟುಪಡುತ್ತಾರೆ, ಆದರೆ ಸರ್ಕಾರ ರೈತರು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಲೇಬೇಕು. ಉತ್ತಮ ಬೆಲೆ ನೀಡಿದರೆ ರೈತನ ಕುಟುಂಬದ ಜತೆ, ನಾಡಿನ ಜನತೆ ಆರೋಗ್ಯವಾಗಿ ಕ್ಷೇಮವಾಗಿರುತ್ತದೆ ಎಂದರು.

ಹೊಸಕೋಟೆ ಸಿದ್ದಪ್ಪ ಮಾತನಾಡಿ, ರೈತರು ಜಮೀನನ್ನು ಮಾರಿಕೊಳ್ಳದೆ ಸೂಕ್ತವಾಗಿ ಪರಿಣಿತರಿಂದ ಮಾಹಿತಿ ಪಡೆದು ಬೆಳೆಯನ್ನು ಬೆಳೆಯುವುದರಿಂದ ಹಾಗೂ ಸಾವಯವ ಜೈವಿಕ ಅಂಶದಿಂದ ಬೆಳೆ ಬೆಳೆಯುವುದರಿಂದ ಪ್ರತಿಯೊಬ್ಬರ ಆರೋಗ್ಯ ಹಾಗೂ ಬೆಳೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತೀಯ ಕಿಸಾನ್ ಸಂಘದ ನಂಜನಗೂಡು ತಾಲೂಕು ಅಧ್ಯಕ್ಷ ಹೊಸಕೋಟೆ ಪ್ರಭುಸ್ವಾಮಿ, ಗ್ರಾಮ ಘಟಕದ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ಇಂಧುದರ, ಮುಖಂಡರಾದ ಶಿವಮಲ್ಲಪ್ಪ, ರಾಜಶೇಖರ್‌ಮೂರ್ತಿ, ಸ್ವಾಮಿ, ಮಹೇಶ್, ವಿಜಯ, ಲೋಹಿತ್, ಮಧು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net