

ಧಾರವಾಡ: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಥ್ಲೆಟಿಕ್ಸ್ನಲ್ಲಿ ನಗರದ ಪ್ರಿಸಮ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಿದ್ಧರಾಮ ಬಬಲಾದಿಮಠ ಗುಂಡು ಎಸೆತ ಹಾಗೂ ಹ್ಯಾಮರ್ ಥೋದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಕಾಲೇಜಿನ ನಿರ್ದೇಶಕ ಶ್ರೀನಿವಾಸ ತಿಮ್ಮನಗೌಡರ, ಕಾರ್ಯದರ್ಶಿ ವೀಣಾ ತಿಮ್ಮನಗೌಡರ, ಪ್ರಾಚಾರ್ಯ ಎಸ್.ಎಂ. ಹುಲ್ಲೂರ, ದೈಹಿಕ ಶಿಕ್ಷಣ ಶಿಕ್ಷಕ ವೈ.ಎಂ. ಮಾಸ್ತಿ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.