

ಹುಬ್ಬಳ್ಳಿ : ಧಾರವಾಡ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಪ್ರೆಸೆಂಟೇಶನ್ ಬಾಲಕಿಯರ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ದಿನಾಂಕ ಸೋಮವಾರ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ನಗರದ ಪಿ.ಸಿ. ಜಾಬಿನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ವಿದ್ಯಾರ್ಥಿ ಆದಿತ್ಯಾ ಚಿಲ್ಲೂರ ಪ್ರಥಮ ಸ್ಥಾನ ಗಳಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿನಿ ಸಿಂಚನಾ ಕಲಘಟಗಿ ದ್ವಿತಿಯ ಸ್ಥಾನ ಗಳಿಸಿದ್ದಾಳೆ.
ಬೆಳಗಾವಿಯಲ್ಲಿ ನಡೆದ ದಸರಾ ವಿಭಾಗಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿದ ಪಿ.ಸಿ. ಜಾಬಿನ ಕಾಲೇಜಿನ ಸಾಕ್ಷಿ ಶಿರಳ್ಳಿ 4 ಚಿನ್ನದ ಪದಕ ಮತ್ತು 2 ಬೆಳ್ಳಿಯ ಪದಕ ಪಡೆದು, ರಾಜ್ಯಮಟ್ಟದ ಮೈಸೂರು ದಸರಾ ಮುಖ್ಯಮಂತ್ರಿ ಟ್ರೋಫಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾಳೆ. ಹರ್ಷರಾಜ ಕೋಟಿ ಜಿಲ್ಲಾಮಟ್ಟದ ದಸರಾ ಈಜು ಸ್ಪರ್ಧೆಯಲ್ಲಿ 3 ಚಿನ್ನದ ಪದಕ ಹಾಗೂ 1 ಬೆಳ್ಳಿ ಪದಕ ಮತ್ತು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ 1 ಬೆಳ್ಳಿಯ ಪದಕ ಹಾಗೂ 2 ಕಂಚಿನ ಪದಕ ಪಡೆದಿದ್ದಾನೆ.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ವಿಶ್ವಭಾರತಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ತಾಲೂಕಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಪಿ.ಸಿ. ಜಾಬಿನ ಕಾಲೇಜಿನ ವಿದ್ಯಾರ್ಥಿ ಸುಮಿತ ಮೆರ್ವಾಡೆ ಪ್ರಥಮ ಸ್ಥಾನ ಪಡೆದು, ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಸಿಂಚನಾ ಗೋಕಾಕ ದ್ವಿತೀಯ ಸ್ಥಾನ ಪಡೆದಿದ್ದಾಳೆ. ವೇದಾಂತ ಕಡ್ಲಾಸ್ಕರ ಹಾಗೂ ಅಮೃತಾ ಕೊಟ್ಟನ್ನವರ ತೃತೀಯ ಸ್ಥಾನ ಪಡೆದಿದ್ದಾರೆ.
ಯಶಸ್ಸು ಗಳಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಬಿ. ಕೋರೆ, ಆಡಳಿತ ಮಂಡಳಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪದವಿ ಪ್ರಾಚಾರ್ಯರಾದ ಡಾ. ಎಲ್. ಡಿ. ಹೊರಕೇರಿ, ಪದವಿ ಪೂರ್ವ ಪ್ರಾಚಾರ್ಯ ಪ್ರೊ. ವಿ.ಆರ್. ವಾಘ್ಮೂಡೆ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಭಾಕರನ್ ಟಿ ಮತ್ತು ಉಮೇಶ ಡಿಡಗನ್ನವರ, ಕ್ರೀಡಾವಿಭಾಗದ ಮುಖ್ಯಸ್ಥೆ ಅಮ್ರಿತಾ ಅಣ್ಣಿಗೇರಿ, ಉಪನ್ಯಾಸಕರು ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.