ಕ್ರೀಡೆಯಲ್ಲಿ ವಾಜಪೇಯಿ ಶಾಲಾ ಮಕ್ಕಳ ಸಾಧನೆ

Achievement of Vajpayee school children in sports
Published on

ಭಾಗಮಂಡಲ:

ಭಾಗಮAಡಲದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಈ ಶೈಕ್ಷಣಿಕ ಸಾಲಿನ ನಾಪೋಕ್ಲು ವಲಯ ಮಟ್ಟದ ಕ್ರೀಡಾಕೂಟದ ಪ್ರಾಥಮಿಕ ಶಾಲಾ ಬಾಲಕರ ವಿಭಾಗ ಕಬಡ್ಡಿಯಲ್ಲಿ ಪ್ರಥಮ ಸ್ಥಾನ, ಹ್ಯಾಂಡ್ ಬಾಲ್ ಪ್ರಥಮ, ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಬಾಲಕಿಯರ ಕಬಡ್ಡಿಯಲ್ಲಿ ಪ್ರಥಮ, ಹ್ಯಾಂಡ್ ಬಾಲ್ ಪ್ರಥಮ, ಥ್ರೋ ಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಬಾಲಕಿಯರ ರಿಲೇ ಪ್ರಥಮ, ಬಾಲಕಿಯರ ಲಾಂಗ್ ಜಂಪ್ ಕೀರ್ತನಾ ಪ್ರಥಮ, ಬಾಲಕರ ಲಾಂಗ್ ಜಂಪ್ ಆಶಿಕ್ ದ್ವಿತೀಯ, ಹೈಜಂಪ್ ಆಶಿಕ್ ಪ್ರಥಮ, 400 ಮೀಟರ್ ಓಟ ಪ್ರಧಾನ್ ಪ್ರಥಮ, ಭಾರದ ಗುಂಡು ಎಸೆತ ಲಿವಿನ ದ್ವಿತೀಯ, 200 ಮೀ. ಓಟ ಮನೋಜ್ ದ್ವಿತೀಯ ಸ್ಥಾನ, 600 ಮೀ. ಓಟ ಮಿಥುನ್ ತೃತೀಯ ಸ್ಥಾನ, 100 ಮೀ. ಓಟ ಆಶಿಕ್ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗಮಂಡಲದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ಕಬಡ್ಡಿ ಪ್ರಥಮ, ಥ್ರೋಬಾಲ್ ಪ್ರಥಮ, ವಾಲಿಬಾಲ್ ಪ್ರಥಮ, ಹ್ಯಾಂಡ್ ಬಾಲ್ ಪ್ರಥಮ, ಬಾಲಕಿಯರ ಕಬಡ್ಡಿ ದ್ವಿತೀಯ, ಥ್ರೋಬಾಲ್ ಪ್ರಥಮ, ಹ್ಯಾಂಡ್ ಬಾಲ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಅಥ್ಲೆಟಿಕ್ಸ್ ವಿಭಾಗದಲ್ಲಿ ಚೇತನ್ 100 ಮೀ. ಓಟ ಪ್ರಥಮ, ಭಾರದ ಗುಂಡು ಎಸೆತ ಪ್ರಥಮ, ಭರ್ಜಿ ಎಸೆತ ಪ್ರಥಮ, ಕೇಶನ್ ಭಾರದ ಗುಂಡು ಎಸೆತ ದ್ವಿತೀಯ, 1500 ಮೀ. ಓಟ ಧ್ಯಾನ್ ಪ್ರಥಮ, ಪವನ್ ದ್ವಿತೀಯ. 800 ಮೀ. ಓಟ ಚಂದನ್ ಪ್ರಥಮ, 3000 ಮೀ. ಓಟ ಸಮರ್ಥ್ ಪ್ರಥಮ, ಬಿಪಿನ್ ದ್ವಿತೀಯ, 400 ಮೀ ಓಟ ದೇವೇಂದ್ರ ತೃತೀಯ, 100 ಮೀ. ಓಟ ಗಗನ್ ತೃತಿಯ, ಶರಣಬಸವ 800 ಮೀ ಓಟ ತೃತೀಯ, 4100 ಮೀ ರಿಲೇ ದ್ವಿತೀಯ. 4400 ಮೀ. ರಿಲೇ ಪ್ರಥಮ ಬಹುಮಾನ ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಡಯಾನ ತಟ್ಟೆ ಎಸೆತ ಪ್ರಥಮ, ಭಾರದ ಗುಂಡು ಎಸೆತ ತೃತಿಯ, ವರ್ಷಿಣಿ 100 ಮೀ. ಓಟ ತೃತಿಯ, 200 ಮೀ ಓಟ ಪ್ರಥಮ, ಪುಷ್ಪಿತಾ 400 ಮೀ. ಓಟ ತೃತೀಯ, ಧನ್ಯ 3000 ಮೀ. ಓಟ ಪ್ರಥಮ, 4100 ರಿಲೇ ದ್ವಿತೀಯ, 4400 ರಿಲೇ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲೆಯ ಪ್ರಾಂಶುಪಾಲ ಲೋಕೇಶ್, ನಿಲಯ ಪಾಲಕ ದೀಪಕ್ ಕೆ.ಕೆ., ದೈಹಿಕ ಶಿಕ್ಷಣ ಶಿಕ್ಷಕÀ ಪವನ್ ಸಾಗರ್ ಕೆ.ಪಿ. ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net