

ಚಿತ್ರದುರ್ಗ: ನಗರದಲ್ಲಿ ಗುರುವಾರ ಮುಕ್ತಾಯಗೊಂಡ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಎಸ್‌ಆರ್‌ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸಾಧನೆಗೈದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದ ಷಟಲ್ ಬ್ಯಾಡ್ಮಿಂಟನ್, ವಾಲಿಬಾಲ್, ಬಾಲಕರ ವಿಭಾಗದ ಥ್ರೋ ಬಾಲ್‌ನಲ್ಲಿ ಕ್ರಮವಾಗಿ ಪ್ರಥಮ, ಬಾಸ್ಕೆಟ್‌ಬಾಲ್, ಫುಟ್‌ಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಕೆ.ಶ್ರೇಯಾ 200 ಮೀ. ಓಟದಲ್ಲಿ ದ್ವಿತೀಯ, ಮುಜಾಮಿಲ್ ಎತ್ತರ ಜಿಗಿತ ಪ್ರಥಮ, 110ಮೀ ಹರ್ಡಲ್ಸ್‌ನಲ್ಲಿ ದ್ವಿತೀಯ, ಮೋಕ್ಷ್ ಡಿ ಜೈನ್ 800ಮೀ ಓಟದಲ್ಲಿ ದ್ವಿತೀಯ, ಸಾರಿಯಾ ಅನಿಸ್ ಹ್ಯಾಮರ್ ಥ್ರೋನಲ್ಲಿ ಪ್ರಥಮ, ಎಸ್.ಬಿಂದು ದ್ವಿತೀಯ, ಚೆಸ್‌ನಲ್ಲಿ ಕೆ.ಟಿ.ವರ್ಷಾ ಪ್ರಥಮ, ನಯನಶ್ರೀ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ, ಪ್ರಾಚಾರ್ಯ ಇ.ಗಂಗಾಧರ್, ದೈಹಿಕ ಶಿಕ್ಷಣ ನಿರ್ದೇಶಕ ಜೆ.ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.