ಮಹೇಶ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

New Mahesh Collage
Published on

ಹುಬ್ಬಳ್ಳಿ : ನಗರದಲ್ಲಿ ಏರ್ಪಡಿಸಿದ್ದ ಯಂಗ್ ಇಂಡಿಯನ್ಸ್ ಪಾರ್ಲಿಮೆಂಟ್ ಸ್ಪರ್ಧೆಯಲ್ಲಿ ಇಲ್ಲಿನ ಡಾ. ಆರ್.ಬಿ. ಪಾಟೀಲ ಮಹೇಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ, ಉತ್ತಮ ಸಾಧನೆ ತೋರಿದ್ದಾರೆ.

ದಕ್ಷಿಣ ಮಹಾರಾಷ್ಟ್ರ, ಉತ್ತರ ಕರ್ನಾಟಕ ಮತ್ತು ಗೋವಾದ 216 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ನಿತೀಶ್ ಲಹರಿ ಎಜುಕೇಶನ್ ಸೊಸೈಟಿಯ ಡಾ. ಆರ್. ಬಿ. ಪಾಟೀಲ ಮಹೇಶ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಕುಬೇರ ಶಿರಾಳ್ಕರ ಮತ್ತು ವೇದಾಂತ ಠಕ್ಕರ ಅವರು ಅತ್ಯುತ್ತಮ ಪ್ರತಿಭೆ ಪ್ರದರ್ಶಿಸಿದ್ದಾರೆ.

ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ ಎರಡೂ ದಿನಗಳ ಕಲಾಪಕ್ಕೆ ಸಂಸತ್ ಭವನದ ಅತ್ಯುತ್ತಮ ನಾಯಕ ಪ್ರಶಸ್ತಿ ಪಡೆದಿದ್ದಕ್ಕಾಗಿ ಕುಬೇರ ಶಿರಾಳಕರ ಅವರನ್ನು ಸನ್ಮಾನಿಸಲಾಯಿತು.

ಇದೇ ನವೆಂಬರ್​ನಲ್ಲಿ ಸಂಸತ್ ಭವನದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಕುಬೇರ ಶಿರಾಳಕರ ಭಾಗವಹಿಸಲಿದ್ದಾರೆ. ವೇದಾಂತ ಠಕ್ಕರ ಅವರು ಅತ್ಯುತ್ತಮ ಡ್ರೆಸ್ಡ್ ಡೆಲಿಗೇಟ್ ಪ್ರಶಸ್ತಿ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಡಾ. ಆರ್. ಬಿ. ಪಾಟೀಲ ಮಹೇಶ ಪಿಯು ಕಾಲೇಜಿನ ಕಾರ್ಯದರ್ಶಿ ಆರ್.ಎನ್. ದೇಸಾಯಿ, ಪ್ರಾಂಶುಪಾಲ ರಾಮ ಮೋಹನ ಎಚ್.ಕೆ., ಉಪ ಪ್ರಾಂಶುಪಾಲ ರಮೇಶ ಹೊಂಬಾಳಿ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ನೀಲ್ ಪ್ರತಾಪನ್, ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ಇಬ್ಬರೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net