

ತಾಳಿಕೋಟೆ: ಪಟ್ಟಣದ ಮಿಣಜಗಿ ಕ್ರಾಸ್ನಲ್ಲಿರುವ ನಮಠೇಶ್ವರ ಶಿಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಬೆಸ್ಟ್ ಪಿಯು ಕಾಲೇಜಿನ 2023&24ನೇ ಸಾಲಿನ ದ್ವೀತಿಯ ಪಿಯು ಪರಿೆಯಲ್ಲಿ ಶಾಲಾ ಲಿತಾಂಶ ಶೇ.100ಕ್ಕೆ 100 ರಷ್ಟಾಗಿದೆ.
ವಿಜ್ಞಾನ ವಿಭಾಗದ ಒಟ್ಟು 160 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಶೇ.95 ರಷ್ಟು ಲಿತಾಂಶ ಪಡೆದಿದ್ದಾರೆ. 42 ವಿದ್ಯಾರ್ಥಿಗಳು ಶೇ.90 ರಷ್ಟು ಲಿತಾಂಶ. 30 ವಿದ್ಯಾರ್ಥಿಗಳು ಶೇ.80 ರಷ್ಟು ಲಿತಾಂಶ ಪಡೆದಿದ್ದಾರೆ.
ಮಲ್ಲಿಕಾರ್ಜುನ ಕುಳಗೇರಿ (588) ಶೇ.98, ಐಶ್ವರ್ಯ ಮೋಹಿತೆ (588) ಶೇ. 98 ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ವರಪ್ರಸಾದ ವನಹಳ್ಳಿ (586) ಶೇ. 97.7 ಪಡೆದು ದ್ವೀತಿಯ ಸ್ಥಾನ ಗಳಿಸಿದ್ದಾರೆ. ತನೀಶಾ ಸಾಲಂಕಿ (583) ಶೇ. 97.2 ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.
ಭೌತಶಾಸ್ತ್ರದಲ್ಲಿ 27 ವಿದ್ಯಾರ್ಥಿಗಳು 100ಕ್ಕೆ 100, ರಸಾಯನ ಶಾಸ್ತ್ರದಲ್ಲಿ 2 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದುಕೊಂಡಿದ್ದಾರೆ.
ಗಣಿತ ವಿಷಯದಲ್ಲಿ 10 ವಿದ್ಯಾರ್ಥಿಗಳು 100ಕ್ಕೆ 100, ಜೀವಶಾಸ್ತ್ರ ವಿಷಯದಲ್ಲಿ 41 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು 25 ವಿದ್ಯಾರ್ಥಿಗಳಲ್ಲಿ ಅಂಜಲಿ (552) ಶೇ.92 ಅಂಕ ಪಡೆದು ಪ್ರಥಮ, ಕೀರ್ತನಾ ರಾಜಕುಮಾರ (545) ಶೇ.90.8 ಅಂಕ ಪಡೆದು ದ್ವೀತಿಯ ಹಾಗೂ ವಿನೋದ ಕೋಳುರ (543) ಶೇ.90.5 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಿಣ ಸಂಸ್ಥೆಯ ಅಧ್ಯ ಡಾ. ಎಸ್.ಎಂ. ಸಜ್ಜನ, ಪ್ರಾಚಾರ್ಯ ಕಿಶೋರಗೌಡ ಅಂಗಡಿ, ಉಪಪ್ರಾಚಾರ್ಯ ಎಂ. ಮಾರಣ್ಣ ಹರ್ಷ ವ್ಯಕ್ತಪಡಿಸಿದ್ದಾರೆ.