ಕ್ರೀಡೆಯಲ್ಲಿ ಶ್ರೀ ಶಂಭುಲಿಂಗೇಶ್ವರ ಶಾಲೆ ವಿದ್ಯಾರ್ಥಿಗಳ ಸಾಧನೆ

Shambulingeshwara
ಕ್ರೀಡೆಯಲ್ಲಿ ಶ್ರೀ ಶಂಭುಲಿಂಗೇಶ್ವರ ಶಾಲೆ ವಿದ್ಯಾರ್ಥಿಗಳ ಸಾಧನೆ
Published on

ಗಂಡಸಿ: ಗಂಡಸಿ ಹೋಬಳಿ ಮಟ್ಟದ ಪ್ರೌಢಶಾಲೆಗಳ 2024-2025ನೇ ಸಾಲಿನ ಕ್ರೀಡಾಕೂಟದಲ್ಲಿ ಗಂಡಸಿ ಶ್ರೀ ಶಂಭುಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಬಾಲಕರ ವಾಲಿಬಾಲ್ (ಪ್ರ), ಬಾಲಕರ ವಾಲಿಬಾಲ್ (ದ್ವಿ), ಗುರುಮೂರ್ತಿ- ಭರ್ಜಿ ಎಸೆತ (ಪ್ರ) ಚಂದು- ಎತ್ತರ ಜಿಗಿತ (ಪ್ರ) ಟ್ರಿಪಲ್ ಜಂಪ್ (ತೃ) ಮಾನಸ- ಚಕ್ರಎಸೆತ (ದ್ವಿ), ಭರ್ಜಿ ಎಸೆತ (ತೃ), ಚಂದ್ರಶೇಖರ್- ಚಕ್ರ ಎಸೆತ (ದ್ವಿ), ಗುಂಡು ಎಸೆತ (ತೃ) ಮೋನಿಕಾ- 800 ಮೀ. ಓಟ (ದ್ವಿ) 3000 ಮೀ. ಓಟ (ತೃ), ಮಿಥುನ್- ಎತ್ತರ ಜಿಗಿತ (ತೃ) ಉದ್ದ ಜಿಗಿತ (ತೃ), 4್ಠ100 ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಶ್ರೀ ಶಂಭುಲಿಂಗೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಜಿ.ಎಸ್.ಮಮತಾ, ಕ್ರೀಡಾ ತರಬೇತುದಾರ ದೈಹಿಕ ಶಿಕ್ಷಣ ಶಿಕ್ಷಕ ಪ್ರಸನ್ನ ಕುಮಾರ್, ಶಿಕ್ಷಕರಾದ ದೇವಿನಾಗಭೂಷಣ್, ತೇಜಮೂರ್ತಿ, ಹನುಮಂತಪ್ಪ, ದೇವರಾಜ್, ಶ್ರೀನಿವಾಸ್, ಗೋವಿಂದಪ್ಪ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net