

ಅರಕಲಗೂಡು: ಮೈಸೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕರಾಟೆ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ತಾಲೂಕಿನ ಬಸವಾಪಟ್ಟಣ ಗ್ರಾಮದ ಸ್ಪಾರ್ಟ್‌ನ್ಸ್ ಕ್ಲಬ್ ಕರಾಟೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಕಠಾ-ಕುಮಿತೆ ವಿಭಾಗದಲ್ಲಿ ಎನ್.ಅನ್ವಿತಾ ಪ್ರಥಮ, ಕಠಾ-ಕುಮಿತೆ ವಿಭಾಗದಲ್ಲಿ ನಮನಾ ಎಸ್.ಶೆಟ್ಟಿ ಪ್ರಥಮ, ಚಿನ್ಮನ ಎನ್.ಗೌಡ ಕಠಾ ವಿಭಾಗದಲ್ಲಿ ಪ್ರಥಮ, ಕುಮಿತೆ ವಿಭಾಗದಲ್ಲಿ ದ್ವಿತೀಯ, ಎಸ್.ದೀಕ್ಷಾ ಕಠಾ ವಿಭಾಗದಲ್ಲಿ ಪ್ರಥಮ, ಕುಮಿತೆ ವಿಭಾಗದಲ್ಲಿ ದ್ವಿತೀಯ, ಕಠಾ- ಕುಮಿತೆ ವಿಭಾಗದಲ್ಲಿ ಎಂ.ವೈ.ಉಲ್ಲಸ್ ಪ್ರಥಮ ಗಳಿಸಿದ್ದಾರೆ.