ಯೋಗಾಸನದಲ್ಲಿ ರಿಪಬ್ಲಿಕ್ ಸ್ಕೂಲ್ ಮಕ್ಕಳ ಸಾಧನೆ: ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆ

Achievement of Republic School Children in Yoga Competition Mandya
Published on

ಮಂಡ್ಯ: ಗೋವಾದಲ್ಲಿ ಜ.25 ಮತ್ತು 26ರಂದು ಗೋವಾ ಯೂತ್ ಇಂಡಿಯಾ ಯೋಗ ಫೆಡರೇಷನ್ ಹಾಗೂ ಇಂಟರ್‌ನ್ಯಾಷನಲ್ ಯೂತ್ ಯೋಗ ಫೆಡರೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ನಗರದ ಹೊರವಲಯದಲ್ಲಿರುವ ರಿಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

8 ರಿಂದ 12 ವರ್ಷದೊಳಗಿನವರ ವಿಭಾಗದಲ್ಲಿ ಐದನೇ ತರಗತಿ ವಿದ್ಯಾರ್ಥಿಗಳಾದ ಆರ್.ಜಿಶಾ ಮತ್ತು ಎಚ್.ಆರ್.ತಾನುಷ್ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರಿಗೆ ಯೋಗ ಶಿಕ್ಷಕ ಕ್ಯಾತನಹಳ್ಳಿ ಬಾನುಕುಮಾರ್ ತರಬೇತಿ ನೀಡುತ್ತಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಮಂಜು, ಪ್ರಾಂಶುಪಾಲೆ ಸುನಿತಾ ರಾಜನ್, ಎಚ್‌ಒಡಿ ರಂಗನ್ ಹಾಗೂ ಶಿಕ್ಷಕರ ವರ್ಗ ಅಭಿನಂದನೆ ಸಲ್ಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net