ಎಂಜಿಎಂ ಯೂನಿವರ್ಸಲ್ ಶಾಲೆ ವಿದ್ಯಾರ್ಥಿಗಳ ಸಾಧನೆ

MGM SCHOOL
Published on

ಲಕ್ಷ್ಮೇಶ್ವರ: ಡ್ರೀಮ್ ವರ್ಡ್ ಮಾರ್ಷಲ್ ಆರ್ಟ್ ಟ್ರಸ್ಟ್ ವತಿಯಿಂದ ಗಂಗಾವತಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆರನೇ ಆಲ್ ಇಂಡಿಯನ್ ಒಪನ್ ಕರಾಟೆ ಚಾಂಪಿಯನ್‌ಶಿಪ್- 2023ರಲ್ಲಿ ಪಟ್ಟಣದ ಎಂಜಿಎಂ ಯೂನಿವರ್ಸಲ್ ಶಾಲೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಚಾಂಪಿಯನ್‌ಶಿಪ್‌ನ ಕಟಾ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಗಗನ್, ವಿರಾಟ್, ಶ್ರೀಶ ಹಾಗೂ ವಿಕ್ರಾಂತ ಕ್ರಮವಾಗಿ ಮೊದಲನೇ ಮತ್ತು ಎರಡನೇ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಮಕ್ಕಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net