

ವಿಜಯಪುರ : ನಗರದ ಲೋಕ ಕಲ್ಯಾಣ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ವಿಕಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಪ್ರಸಕ್ತ ಸಾಲಿನ ಕೆಜಿಎಸ್&3 ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉತ್ತಮ ಸಾಧನೆಗೈದಿದ್ದಾರೆ.
ವಿದ್ಯಾರ್ಥಿನಿ ಅಪ್ಸಾ ಮುಲ್ಲಾ ಚಿತ್ರಕಲೆಯಲ್ಲಿ, ವಿಶಾಲ್ ಚೌಹಾನ್ ಮಿಮಿಕ್ರಿಯಲ್ಲಿ, ಬೀಬಿ ಆಯೇಶಾ ಗೋಡಿಹಾಳ ಮತ್ತು ಜಾನವಿ ಕೋಕಟ್ನೂರ್ ಅಭಿನಯ ಗೀತೆಯಲ್ಲಿ ಹಾಗೂ ಚೈತ್ರಾ ವಾಡೇದ ಭಕ್ತಿ ಗೀತೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಶಾಯಿನ ನಗಾರ್ಚಿ ಆಶುಭಾಷಣದಲ್ಲಿ, ನವನೀತ್ ಕೋರ್ ಹಿಂದಿ ಭಾಷಣದಲ್ಲಿ, ಪ್ರದಿಪ್ ರಾಠೋಡ್ ಚಿತ್ರಕಲೆಯಲ್ಲಿ, ಫಾತಿಮಾ ಗೊಡಿಹಾಳ ದೇಶಭಕ್ತೀಗಿತೆಯಲ್ಲಿ ಮತ್ತು ಹರ್ಷಿತಾ ರಸಾಗರ್ ಕನ್ನಡ ಕಂಠಪಾಠದಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿ ಚೇತನ್ ವಾಡೇದ ಕ್ಲಾಯ್ ಮಾಡ್ಲಿಂಗ್ನಲ್ಲಿ ತೃತೀಯ, ಶ್ರೀದೇವಿ ಪಾತ್ರೋಟಿ, ಕಿರಣ್ ರಾಠೋಡ್ ಮತ್ತು ಸಮೀಾ ಚೂರಿ ಕ್ವಿಜ್ನಲ್ಲಿ ತೃತೀಯ, ನವನೀತ್ ಕೋರ್ ಟಾಕ್ ಕ್ವಿಜ್ನಲ್ಲಿ ತೃತೀಯ, ಆನಂದ್ ರಜಪೂತ ಜಾನಪದ ಗೀತೆಯಲ್ಲಿ ತೃತೀಯ, ಅರ್ಶಿಯಾ ನಗಾರ್ಚಿ ಅರೇಬಿಕ್ ಪಠಣದಲ್ಲಿ ತೃತೀಯ, ಸುಪ್ರೀತಾ ಕರ್ನಾಳ್ ಭಕ್ತೀಗಿತೆಯಲ್ಲಿ ತೃತೀಯ, ಐಮನ್ ಮೊಮಿನ ಕಥೆಯಲ್ಲಿ ತೃತೀಯ, ಐಶ್ವರ್ಯ ರಾಠೋಡ ಪ್ಲೇ ಮಾಡ್ಲಿಂಗ್ನಲ್ಲಿ ತೃತೀಯ ಮತ್ತು ಸುಹಾಸಿನಿ ಇಚ್ಚುರ್ ಕನ್ನಡ ಕಂಠಪಾಠದಲ್ಲಿ ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಶಾಲೆಯ ಅಧ್ಯಕ್ಷ ದಾನಪ್ಪ ಸೂರಗೊಂಡ, ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ, ನಿರ್ದೇಶಕ ರಾಜು ರಾಠೋಡ, ಉಪ ಕಾರ್ಯದರ್ಶಿ ದಯಾಸಾಗರ ಸೂರಗೊಂಡ, ಮುಖ್ಯ ಗುರುಮಾತೆ ಲಕ್ಷಿ$್ಮ ಹೂಗಾರ, ಶಿಕ್ಷಕ ಪ್ರದಿಪ ಅಂಬಿಗ, ಸಂಜೀವ ಪವಾರ, ವೀಣಾ ಸಕ್ರೇನವರ, ವಿಜಯಲಕ್ಷಿ$್ಮ ವಾಡೇದ ಹರ್ಷ ವ್ಯಕ್ತಪಡಿಸಿದ್ದಾರೆ.