ಟೆಕ್ವಾಂಡೋದಾಲ್ಲಿ ಕುಶಾಲನಗರ ವಿದ್ಯಾರ್ಥಿಗಳ ಸಾಧನೆ

Achievement of Kushalanagar students in Taekwondo
Published on

ಕುಶಾಲನಗರ:

ಕರ್ನಾಟಕ ಟೆಕ್ವಾಂಡೋ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಬಸವೇಶ್ವರನಗರದ ಡಾ. ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಮುಕ್ತ ಟೆಕ್ವಾಂಡೋ ಚಾಂಪಿಯನ್‌ಶಿಪ್ ನಲ್ಲಿ ಕುಶಾಲನಗರ ಡೆಕ್ಕನ್ ಟೇಕ್ವಾಂಡೋ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಸಿಂಚನ ಕೆ ಐ, ಉತ್ಕರ್ಷ್ ಕೆ.ಐ., ಇಕ್ಷವಾಕ್ ಕೆ, ಭಗತ್ ಟಿ ವಿ, ಅಚ್ಯುತ ಬಿ., ಧನ್ವಿನ್ ಅಜಿತ್, ಆದ್ರಿತ್ ಎ. ಎಂ., ಕೃಷ್ಣಾ ಬಿ., ಯುವಿನ್ ಶೆಟ್ಟಿ, ಕನಿಷ್ಕ ಎಸ್, ಸಮ್ಯಕ್ ಕೆ.ಸಿ. ಇವರುಗಳಿದ್ದ ತಂಡ ಒಟ್ಟಾರೆಯಾಗಿ 6 ಚಿನ್ನ, 6 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಡೆಕ್ಕನ್ ಟೆಕ್ವಾಂಡೊ ತರಬೇತಿ ಸಂಸ್ಥೆಯ ತರಬೇತುದಾರ ಮುತ್ತಪ್ಪ ಹೆಚ್.ಎಲ್. ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net