

ಗೋಣಿಕೊಪ್ಪ: ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ, ಪಿಯುಸಿ ವಿಭಾಗದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಪೊನ್ನಂಪೇಟೆಯ ಶರತ್, ಹಾಗೂ ದೇಯಂಡ ಮೇದಪ್ಪ ಅವರ ಮಾರ್ಗದರ್ಶನದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಕ್ಸಿಂಗ್ ಬಾಲಕಿಯರ ವಿಭಾಗದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಯು.ಎನ್.ಅರ್ಚನಾ 48-50 ಕೆಜಿ ವಿಭಾಗದಲ್ಲಿ ಚಿನ್ನ ಹಾಗೂ ಸಂಜನಾ 60-63 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಲಯನ್ಸ್ ಕಾಲೇಜಿನ ಎಂ.ಬಿ.ಪ್ರಜ್ವಲಾ 64-66 ಕೆಜಿ ವಿಭಾಗದಲ್ಲಿ ಚಿನ್ನ, ಬಾಲಕರ ವಿಭಾಗದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಯು.ಆರ್.ಮಂದಣ್ಣ 48 ಕೆಜಿ ವಿಭಾಗದಲ್ಲಿ ಚಿನ್ನ ಹಾಗೂ ಹರ್ಷ 48-50 ಕೆಜಿ ವಿಭಾಗದಲ್ಲಿ ಕಂಚು ಹಾಗೂ ಪೊನ್ನಂಪೇಟೆಯ ಸಂತ ಅಂತೋಣಿ ಕಾಲೇಜಿನ ಪ್ರಜ್ವಲ್ 52-54 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸುವುದರೊಂದಿಗೆ ಬಾಲಕರು ಹಾಗೂ ಬಾಲಕಿಯರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.