ಗುರುಕುಲ ಇಂಟರ್‌ನ್ಯಾಷನಲ್ ಶಾಲೆ ಸಾಧನೆ

gurukula internatinal school (1)
Published on

ಅರಸೀಕೆರೆ: ತಾಲೂಕಿನ ಪ್ರತಿಷ್ಠಿತ ಗುರುಕುಲ ಇಂಟರ್‌ನ್ಯಾಷನಲ್ ಶಾಲೆಗೆ ಸಿಬಿಎಸ್‌ಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಲಭಿಸಿದೆ.

ಪರೀಕ್ಷೆಗೆ ಹಾಜರಾಗಿದ್ದ 21 ವಿದ್ಯಾರ್ಥಿಗಳ ಪೈಕಿ 11 ಅತ್ಯುನ್ನತ, 9 ಪ್ರಥಮ, ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾನೆ.

ಕೆ.ಎಂ.ನಿಲೋಚನ ಶೇ.89.8ಅಂಕ ಪಡೆದು ಟಾಪರ್ ಹಿ ಹೊರಹೊಮ್ಮಿದ್ದಾರೆ. ಜಿ.ಡಿ.ಮೇಘನಾ 87.8, ಎಂ.ಹುಸ್ಸೇನ್ 87.4, ಚಿನ್ಮಯಿ ಶೇ.85.4, ನಿಖಿಲ್ 84.4, ಅಕ್ಷತಾ 83.8, ಅಪೇಕ್ಷಾ 83.4, ನೂರ್ ಸಾರಿಕಾ 83.4, ಕುಶಾಲ್ 82.6, ಶ್ರೀಗಣೇಶ್ 81.4 ಅಂಕಗಳಿಸಿದ್ದಾರೆ ಎಂದು ಶಾಲೆಯ ಅಧ್ಯಕ್ಷ ದೇಶಾಣಿ ಆನಂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net