ರಾಜ್ಯ ಮಟ್ಟದ ಕುಸ್ತಿಯಲ್ಲಿ ಕೃಷಿಕನ ಮಗಳ ಸಾಧನೆ

Achievement of farmer's daughter in state level wrestling
ಲಚ್ಯಾಣ ಗ್ರಾಮದ ಬಿಎಲ್‌ಡಿಇ ಸಂಸ್ಥೆಯ ಸಂಗನಬಸವೇಶ್ವರ ಶಾಲಾ ವಿದ್ಯಾರ್ಥಿನಿ ಭಾಗ್ಯಶ್ರೀ ಕರಾಳೆ.
Published on

ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಬಿಎಲ್‌ಡಿಇ ಸಂಸ್ಥೆಯ ಸಂಗನಬಸವೇಶ್ವರ ಕೃಷಿ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿ ಭಾಗ್ಯಶ್ರೀ ಕರಾಳೆ ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯದಲ್ಲಿ 3ನೇ ಸ್ಥಾನ ಪಡೆದು ಸಾಧನೆಗೈದಿದ್ದಾಳೆ.

8ನೇ ತರಗತಿಯಲ್ಲಿ ಓದುತ್ತಿರುವ ಭಾಗ್ಯಶ್ರೀ ಬಡ ಕುಟುಂಬದ ವಿದ್ಯಾರ್ಥಿಯಾಗಿದ್ದು, ತಂದೆ ಸಾಯಬಣ್ಣ ಕೃಷಿಕರಾಗಿದ್ದಾರೆ. ವಿದ್ಯಾರ್ಥಿನಿ ಸಾಧನೆಗೆ ಸಂಸ್ಥೆಯ ಅಧ್ಯಕ್ಷ- ಸಚಿವ ಎಂ.ಬಿ. ಪಾಟೀಲ, ಶಾಲೆ ಮುಖ್ಯಶಿಕ್ಷಕ ಪಿ.ಎಸ್. ನಾಯಕ, ದೈಹಿಕ ಶಿಕ್ಷಣ ಶಿಕ್ಷಕ ಶಂಕರ ಚವ್ಹಾಣ ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net