

ವಿಜಯಪುರ:ನಗರದ ಬಿಎಲ್ಡಿಇ ಡಿಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಕಿವಿ, ಮೂಗು ಹಾಗೂ ಗಂಟಲು ವಿಭಾಗದಲ್ಲಿ ಹುಟ್ಟು ಶ್ರವಣ ದೋಷದಿಂದ ಬಳಲುತ್ತಿದ್ದ ಎರಡು ವರ್ಷದೊಳಗಿನ ಇಬ್ಬರು ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಅತ್ಯಾಧುನಿಕ ಕಿವಿಯ ಶಸಚಿಕಿತ್ಸೆಯನ್ನು ಗುರುವಾರ ಯಶಸ್ವಿಯಾಗಿ ನಡೆಸಲಾಯಿತು.ಸುವರ್ಣ ಆರೋಗ್ಯ ಸುರಾ ಯೋಜನೆಯಡಿ ಆಸ್ಪತ್ರೆಯಲ್ಲಿ ಈವರೆಗೆ ಐದು ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸಚಿಕಿತ್ಸೆ ನಡೆಸಿದಂತಾಗಿದ್ದು, ಈ ಮಕ್ಕಳು ಈಗಾಗಲೇ ಮಾತನಾಡುವ ಪ್ರಕ್ರಿಯೆಯೂ ಆರಂಭವಾಗಿದೆ.
ಬಿಎಲ್ಡಿಇ ಆಸ್ಪತ್ರೆಯಲ್ಲಿ ಈ ಯೋಜನೆಯಡಿ ಮೂರು ವರ್ಷದೊಳಗಿನ ಹುಟ್ಟು ಕಿವುಡ ಮಕ್ಕಳಿಗೆ ಈ ಶಸಚಿಕಿತ್ಸೆ ಲಭ್ಯವಿದ್ದು, 6 ಲ ರೂ. ವೆಚ್ಚದ ಕಿವಿಯ ಇಂಪ್ಲಾಂಟ್ನ್ನು ಒಳಕಿವಿಗೆ ಅಳವಡಿಸಬಹುದಾಗಿದೆ. ನಂತರ ಎರಡು ವರ್ಷ ವಾಕ್ ಶ್ರವಣ ತರಬೇತಿ ನೀಡುತ್ತಿದ್ದು, ಸಾರ್ವಜನಿಕರು ಈ ಸೌಲಭ್ಯ ಪಡೆದುಕೊಳ್ಳಬೇಕೆಂದು ವೈದ್ಯಕಿಯ ಆಸ್ಪತ್ರೆ ಅಧೀಕ ಡಾ. ರಾಜೇಶ ಹೊನ್ನುಟಗಿ ತಿಳಿಸಿದ್ದಾರೆ.
ಯಾವುದೇ ಮಗು ಶಬ್ದಗಳಿಗೆ ಸ್ಪಂದಿಸದಿದ್ದರೆ ಮೂರು ತಿಂಗಳೊಳಗೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಬೇಕು. ಶ್ರವಣದೋಷ ಕಂಡುಬಂದರೆ ಒಂದೂವರೆ ವರ್ಷದೊಳಗೆ ಚಿಕಿತ್ಸೆ ನೀಡಿದರೆ ಮಗು ಇತರ ಮಕ್ಕಳಂತೆ ಪೂರ್ಣವಾಗಿ ಮಾತನಾಡಬಲ್ಲದು. ಅಲ್ಲದೆ, ಶಾಲೆಯಲ್ಲಿ ವಿದ್ಯಾಭ್ಯಾಸವವನ್ನೂ ಮಾಡಬಹುದಾಗಿದೆ. ಸಮಾಜದ ಮುಖ್ಯವಾಹಿನಿಗೆ ಸೇರಲು ಅನಕೂಲವಾಗುತ್ತದೆ. ಆದರೆ, ಮೂರು ವರ್ಷದ ನಂತರ ಚಿಕಿತ್ಸೆ ಬಯಸಿದರೆ ಆ ಮಗುವಿಗೆ ಸರ್ಕಾರದ ಈ ಉಚಿತ ಯೋಜನೆ ಸೌಲಭ್ಯ ಸಿಗುವುದಿಲ್ಲ. ಬಿಎಲ್ಡಿಇ ಆಸ್ಪತ್ರೆಯಲ್ಲಿ ಖಾಸಗಿಯಾಗಿಯೂ ಈ ಶಸಚಿಕಿತ್ಸೆ ಲಭ್ಯವಿದೆ. ಯಾವುದೇ ಮಗುವಿಗೆ ಈ ತರಹದ ಶಸಚಿಕಿತ್ಸೆ ಎರಡು ವರ್ಷದೊಳಗೆ ಮಾಡಿಸಿದರೆ ಮಾತ್ರ ಅತ್ಯಂತ ಒಳ್ಳೆಯ ಫಲಿತಾಂಶ ಸಿಗುತ್ತದೆ. ಆದರೆ, ಐದು ವರ್ಷದ ನಂತರ ಶಸಚಿಕಿತ್ಸೆಯಾದರೂ ಮಗುವಿಗೆ ಕೇವಲ ಶಬ್ದ ಕೇಳುತ್ತದೆ, ಹೊರತು ಮಾತುಗಳು ಅರ್ಥವಾಗುವ ಶಕ್ತಿ ಇರದ ಕಾರಣ ಮಾತನಾಡಲು ಬರುವುದಿಲ್ಲ ಎಂದು ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಮತ್ತು ಇಂಪ್ಲಾಂಟ್ ಕೋ&ಆರ್ಡಿನೇಟರ್ ಡಾ. ಎಚ್.ಟಿ. ಲತಾದೇವಿ ತಿಳಿಸಿದ್ದಾರೆ.
2025ರ ಜನವರಿಯಿಂದಲೇ ಈ ಯೋಜನೆ ನಮ್ಮ ಆಸ್ಪತ್ರೆಯಲ್ಲಿ ಪ್ರಾರಂಭವಾಗಿದ್ದು, ನಮ್ಮಲ್ಲಿ ಎಲ್ಲ ನವಜಾತಶಿಶುಗಳನ್ನು ಶ್ರವಣ ಪರೀೆಗಳಿಗೆ ಒಳಪಡಿಸಿ ಹುಟ್ಟು ಕಿವುಡತನ ಪತ್ತೆ ಹಚ್ಚುವ ಸೌಲಭ್ಯ ಹಾಗೂ ಶಸಚಿಕಿತ್ಸೆಯು ಲಭ್ಯವಿರುವುದರಿಂದ ಜನ ಸಾಮಾನ್ಯರು ಈ ಯೋಜನೆ ಉಪಯೋಗಿಸಬೇಕು ಎಂದು ಕುಲಪತಿ ಡಾ. ಅರುಣ ಇನಾಮದಾರ ತಿಳಿಸಿದ್ದಾರೆ.ಆಸ್ಪತ್ರೆ ವೈದ್ಯರ ಯಶಸ್ವಿ ಶಸಚಿಕಿತ್ಸೆಗೆ ಕಾಲೇಜಿನ ಪ್ರಾಚಾಯೆರ್ ಡಾ. ತೇಜಶ್ವಿನಿ ವಲಭ, ವೈದ್ಯಕಿಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪನವರ ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯಪುರದ ಬಿಎಲ್ಡಿಇ ಡಿಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಇಎನ್ಟಿ ವಿಭಾಗದಲ್ಲಿ ಹುಟ್ಟು ಶ್ರವಣ ದೋಷದಿಂದ ಬಳಲುತ್ತಿದ್ದ ಎರಡು ವರ್ಷದೊಳಗಿನ ಇಬ್ಬರು ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಅತ್ಯಾಧುನಿಕ ಕಿವಿಯ ಶಸಚಿಕಿತ್ಸೆ ಯಶಸ್ವಿಯಾಗಿ ಕೈಗೊಳ್ಳಲಾಯಿತು. ಡಾ. ಎಚ್.ಟಿ. ಲತಾದೇವಿ ವೈದ್ಯರ ತಂಡದವರು ಮತ್ತಿತರರಿದ್ದಾರೆ.