

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿಶ್ವವಿದ್ಯಾಲಯವು ಇತ್ತೀಚೆಗೆ ದಾಂಡೇಲಿಯಲ್ಲಿ ಆಯೋಜಿಸಿದ್ದ ಪುರುಷರ ಗ್ರೀಕೋ ರೋಮನ್ ಕುಸ್ತಿ ಪಂದ್ಯಾವಳಿಯಲ್ಲಿ ಇಲ್ಲಿನ ಕ್ಲಾಸಿಕ್ ಮಹಾವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.
97 ಕೆಜಿ ವಿಭಾಗದಲ್ಲಿ ಶರಣಬಸವ ಗಣಾಚಾರಿ ಪ್ರಥಮ, ವಿನೋದ ಢವಳೇಶ್ವರ 55 ಕೆಜಿಯಲ್ಲಿ ಪ್ರಥಮ, ಬಲಭೀಮ ನಾಯಕ್ 72 ಕೆಜಿಯಲ್ಲಿ ತೃತೀಯ ಸ್ಥಾನ ಪಡೆದು ಜನವರಿಯಲ್ಲಿ ಗುರುಕಾಶಿ ವಿಶ್ವವಿದ್ಯಾಲಯದಲ್ಲಿ ಜರುಗುವ ಅಂತರ ವಿಶ್ವವಿದ್ಯಾಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫ್ರೀಸ್ಟೆ Êಲ್ ಕುಸ್ತಿಯಲ್ಲ್ಲಿ ಶಿವಕುಮಾರ 70 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ದಕ್ಷಿಣ ವಲಯ ಅಖಿಲ ಭಾರತೀಯ ಅಂತರ ವಿದ್ಯಾಲಯಗಳ ಪಂದ್ಯಾವಳಿಗಳಲ್ಲ್ಲಿ ಭಾಗವಹಿಸುವ ಕರ್ನಾಟಕ ವಿಶ್ವವಿದ್ಯಾಲಯದ ಕಬಡ್ಡಿ ತಂಡಕ್ಕೆ ಮಹಾವಿದ್ಯಾಲಯದ ವಿದ್ಯಾರ್ಥಿ ರಾಮಕೃಷ್ಣ ಹುಕ್ಕೇರಿ 2ನೇ ಬಾರಿ ಆಯ್ಕೆಯಾಗಿದ್ದಾನೆ.
ಸಾಧಕ ವಿದ್ಯಾರ್ಥಿಗಳನ್ನು ಕ್ಲಾಸಿಕ್ ಸಮೂಹ ಸಂಸ್ಥೆಗಳ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ ಲಕ್ಷ್ಮಣ ಎಸ್. ಉಪ್ಪಾರ, ಪ್ರಾಚಾರ್ಯ ಡಾ. ಎಸ್.ಜಿ. ಹಿರೇಮಠ, ಪ್ರಾಧ್ಯಾಪಕ ಸಚ್ಚಿದಾನಂದ ಉಪ್ಪಾರ, ದೈಹಿಕ ಶಿಕ್ಷಣ ತರಬೇತುದಾರ ನವೀನ ಹಿರೇಮಠ ಅಭಿನಂದಿಸಿದ್ದಾರೆ.