ಶ್ರೀ ವಾಸವಿ ವಿದ್ಯಾ ಕೇಂದ್ರದ ಮಕ್ಕಳ ಸಾಧನೆ

29-kollegal-1
ಕೊಳ್ಳೇಗಾಲ ಪಟ್ಟಣದ ಶ್ರೀ ಮಹದೇಶ್ವರ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪಟ್ಟಣದ ಶ್ರೀ ವಾಸವಿ ವಿದ್ಯಾ ಕೇಂದ್ರ(ರಿ) ಶಾಲೆಯ ವಿದ್ಯಾರ್ಥಿಗಳು.
Published on

ಕೊಳ್ಳೇಗಾಲ : ಪಟ್ಟಣದ ಶ್ರೀ ಮಹದೇಶ್ವರ ಕಾಲೇಜು ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 2024-25ನೇ ಸಾಲಿನ ತಾಲೂಕು ಮಟ್ಟದ ಪ್ರೌಢ ಶಾಲಾ ವಿಭಾಗದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಟ್ಟಣದ ಶ್ರೀ ವಾಸವಿ ವಿದ್ಯಾ ಕೇಂದ್ರ ಶಾಲೆಯ 20 ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದ 800ಮೀ. ಹಾಗೂ 3000 ಮೀ. ಓಟದ ಸ್ಪರ್ದೆಯಲ್ಲಿ ಸಿಂಚನಾ ಪ್ರಥಮ, 100 ಮೀ. ಹಾಗೂ 200 ಮೀ. ಓಟದಲ್ಲಿ ತನುಶ್ರೀ ದ್ವಿತೀಯ, 800 ಮೀ. ಓಟದಲ್ಲಿ ಎಲ್.ಕೀರ್ತನಾ ತೃತೀಯ, 1500 ಮೀ. ಓಟದಲ್ಲಿ ಹಂಸಿನಿಶ್ರೀ (ಪ್ರ), 400 ಮೀ. ಓಟದಲ್ಲಿ (ತೃ), 1500 ಮೀ.ಓಟದಲ್ಲಿ ಎಲ್. ಸಂಜನಾ (ದ್ವಿ), ಉದ್ದ ಜಿಗಿತ ಸ್ಪರ್ಧೆಯಲ್ಲಿ ಬೀಬೀ ಸೂಫಿಯಾ (ಪ್ರ) ಸ್ಥಾನಗಳಿಸಿದ್ದಾರೆ. ಅಂತೆಯೇ, 4400 ಮೀ. ರಿಲೇ ಓಟದ ಸ್ಪರ್ಧೆಯಲ್ಲಿ ಎಸ್. ತನುಶ್ರೀ, ಎಸ್. ಸಿಂಚನಾ, ಎಲ್.ಸಂಜನಾ ಮತ್ತು ಎನ್.ಎಂ.ಪ್ರಾರ್ಥನಾ ಅವರಿದ್ದ ತಂಡ ಪ್ರಥಮ ಸ್ಥಾನ ಪಡೆದಿದೆ. ಎಸ್.ಚಿರಸ್ಮಿತಾ, ಎಚ್.ಎಸ್.ಕೀರ್ತನಾ, ಹಂಸಿನಿಶ್ರೀ, ಎಲ್. ಕೀರ್ತನಾ ತಂಡ ದ್ವಿತೀಯ ಸ್ಥಾನ ಪಡೆದಿದೆ. ಬಾಲಕರ ವಿಭಾಗದ 100 ಮೀ. ಓಟದಲ್ಲಿ ಮೊಹಮದ್ ರೆಹಾನ್ (ಪ್ರ), 200 ಮೀ. ಓಟದಲ್ಲಿ (ದ್ವಿ), ಎಸ್.ನಿರಂಜನ್ ಉದ್ದ ಜಿಗಿತ ಸ್ಪರ್ಧೆಯಲ್ಲಿ (ಪ್ರ), 100 ಮೀ. ಓಟದಲ್ಲಿ (ದ್ವಿ), ತ್ರಿವಿಧ ಜಿಗಿತದಲ್ಲಿ (ತೃ), 400 ಮೀ. ಓಟದಲ್ಲಿ ಎನ್.ಆರ್.ಪ್ರಣೀತ್ (ಪ್ರ), ಗುಂಡು ಎಸೆತ ಸ್ಪರ್ಧೆಯಲ್ಲಿ ಬಿ.ಮಹೇಂದ್ರ (ತೃ), 4100 ಮೀಟರ್ ರಿಲೇ ಓಟದ ಸ್ಪರ್ಧೆಯಲ್ಲಿ ಮೊಹಮದ್ ರೆಹಾನ್, ಎನ್. ಆರ್.ಪ್ರಣೀತ್ , ಎಸ್. ನಿರಂಜನ್, ಎಂ.ಎಸ್.ಸೃಜನ್ ತಂಡ ಹಾಗೂ ಸಮ್ಮದ್, ಪರಿನಯ್ ಕೃಪಲ್, ಮೊಹಮದ್ ಅಹಮದ್ ಖಾನ್, ಡಿ.ರೋಹನ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎ.ಡಿ.ಕುಮಾರ ಕೃಷ್ಣ, ಕಾರ್ಯದರ್ಶಿ ಡಾ.ಪಿ.ಜಿ.ಶ್ರೀಧರ್, ಶಾಲೆಯ ಆಡಳಿತ ಮಂಡಳಿ ಸದಸ್ಯರು, ಮುಖ್ಯಶಿಕ್ಷಕಿ ಬಿ.ಎಸ್.ಗೀತಾ, ದೈಹಿಕ ಶಿಕ್ಷಣ ಶಿಕ್ಷಕ ಸಿ. ನಾಗೇಂದ್ರ, ಎಲಿಜಬೆತ್ ಶಿಬಾ, ಆರ್.ಸುನೀಲ್, ಎಂ.ಸುನೀಲ್, ಎ.ಸೌಮ್ಯಾ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net