ಬೀನಾ ವೈದ್ಯ ಪಬ್ಲಿಕ್ ಸ್ಕೂಲ್ ಮಕ್ಕಳ ಸಾಧನೆ

children who won in sports event
Published on

ಭಟ್ಕಳ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉರ್ದು ನ್ಯಾಷನಲ್ ಕಾಲನಿ ಆಶ್ರಯದಲ್ಲಿ ಮಾವಳ್ಳಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಇಲಾಖೆ ಕ್ರೀಡಾಕೂಟದಲ್ಲಿ ಬೀನಾ ವೈದ್ಯ ಇಂಟರ್​ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಹಲವಾರು ಬಹುಮಾನಗಳನ್ನು ಪಡೆದು ಉತ್ತಮ ಸಾಧನೆ ತೋರಿದ್ದಾರೆ.

ಪ್ರತೀಕ್ಷಾ ಆಚಾರ್ಯ 200 ಮೀಟರ್​ನಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರಥಮ, ಸಮೃದ್ಧಿ ನಾಯ್ಕ ಶಾಟ್​ಫೂಟ್ ಪ್ರಥಮ ಸ್ಥಾನ ಅಮೋಘ ದೇವಾಡಿಗ ಎತ್ತರ ಜಿಗಿತದಲ್ಲಿ ಪ್ರಥಮ, ಚೆಸ್​ನಲ್ಲಿ ಪ್ರಥಮ ಮತ್ತು ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಚೆಸ್ ಬಾಲಕಿಯರ ವಿಭಾಗದಲ್ಲಿ ಶ್ರೇಯಾ ಎಸ್. ಆಚಾರ್ಯ ಪ್ರಥಮ ಸ್ಥಾನ 100 ಮತ್ತು 200 ಮೀಟರ್ ಓಟದಲ್ಲಿ ಲೋಹಿತ್ ಹರಿಕಾಂತ್ ತೃತೀಯ ಸ್ಥಾನ ಚಕ್ರ ಎಸೆತದಲ್ಲಿ ಮಾನ್ಯಾ ತೃತೀಯ ಸ್ಥಾನ ಮಾನ್ವಿ ನಾಯ್ಕ ಮತ್ತು ಭಾನ್ವಿ ನಾಯ್ಕ ಕರಾಟೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net