

ಕಾರ್ಗಲ್: ಶೋಟೋಕಾಯ್ ಕರಾಟೆ ಅಸೋಸಿಯೇಶನ್, ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಹಾಗೂ ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಶನ್ ಸಹಯೋಗದಲ್ಲಿ ಶಿಕಾರಿಪುರದ ಏಕಲವ್ಯ ಕರಾಟೆ ಕ್ಲಬ್ ಸಂಸ್ಥೆಯು ಏರ್ಪಡಿಸಿದ್ದ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಶರಾವತಿ ಕಣಿವೆಯ ಕರಾಟೆ ತರಬೇತಿ ಕೇಂದ್ರದ ಮಕ್ಕಳು ಪಾಲ್ಗೊಂಡು ಕಾರ್ಗಲ್ ಪಟ್ಟಣದ ಮೂವರು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಕಟಾ, ಕುಮಟೆ ವಿಭಾಗದಲ್ಲಿ ಎ.ದನ್ವಿತ್ ಪ್ರಥಮ, ತಮ್ಮಣ್ಣ ಜೈನ್ ಕಟಾ ವಿಭಾಗದಲ್ಲಿ ಪ್ರಥಮ, ಕುಮಟೆ ವಿಭಾಗದಲ್ಲಿ ತೃತೀಯ, ನೇಸರಾ ಶೆಟ್ಟಿ ಕಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಮಾಸ್ಟರ್ ಎಂ.ಎಸ್.ಜನಾರ್ದನ ತಿಳಿಸಿದ್ದಾರೆ.