

ಮೈಸೂರು: 2024ನೇ ಸಾಲಿನ ನೀಟ್, ಸಿಇಟಿ ಹಾಗೂ ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯಲ್ಲಿ ನಗರದ ಬೇಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಬೇಸ್ ಕಾಲೇಜಿನ ಆಡಳಿತ ಮಂಡಳಿಯಿಂದ ಸೋಮವಾರ ಅಭಿನಂದಿಸಲಾಯಿತು.
ಪ್ರಾಂಶುಪಾಲ ಸಾನ್‌ದೀಪ್ ಕನ್ನಡ ವರ್ಧನ ಮಾತನಾಡಿ, ನೀಟ್ ಪರೀಕ್ಷೆಯಲ್ಲಿ ಸಿದ್ಧಾರ್ಥ್ ವಿ.ಗೌಡ (715 ಅಂಕ), ಆರ್.ಸಮೃದ್(700) ಹೆಚ್ಚು ಅಂಕ ಪಡೆದಿದ್ದಾರೆ. ಇಬ್ಬರೂ ಏಮ್ಸ್ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಗುರಿ ಹೊಂದಿದ್ದಾರೆ. 8 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ ಮತ್ತು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು 500ಕ್ಕೂ ಹೆಚ್ಚು ಅಂಕ ಪಡೆದು ವೈದ್ಯಕೀಯ ಶಿಕ್ಷಣ ಪಡೆಯುವ ಉತ್ಸಾಹದಲ್ಲಿದ್ದಾರೆ.
ಸಿಐಟಿ ಹಾಗೂ ಜೆಇಇ ಅಡ್ವಾನ್ಸ್‌ಡ್ ಎರಡೂ ಪರೀಕ್ಷೆಯಲ್ಲಿ ಅಭ್ಯುದಯ್ ಕೆ.ಹೆಗ್ಡೆ ಕಾಲೇಜಿನ ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ. ಅವರು ಐಐಟಿ ಚೆನ್ನೈ ಸೇರುವ ಉತ್ಸಾಹದಲ್ಲಿದ್ದಾರೆ. ಸಿಇಟಿಯಲ್ಲಿ 21 ವಿದ್ಯಾರ್ಥಿಗಳು 5000ಕ್ಕೂ ಹೆಚ್ಚಿನ ರಾಂಕ್ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಶೈಕ್ಷಣಿಕ ಮುಖ್ಯಸ್ಥೆ ಲಕ್ಷ್ಮಿಮೂರ್ತಿ ಮಾತನಾಡಿ, ಫಲಿತಾಂಶಗಳು ವಿದ್ಯಾರ್ಥಿಗಳ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮ ಮತ್ತು ಶಿಕ್ಷಕರ ಸಮರ್ಪಣೆಯ ಫಲವಾಗಿದೆ ಎಂದರು.