

ಕುಮಟಾ: ಇಲ್ಲಿನ ಕೆನರಾ ಕಾಲೇಜು ಸೊಸೈಟಿಯ ಡಾ ಎ.ವಿ. ಬಾಳಿಗಾ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಸಾಸ್ಕೃತಿಕ ಸಂಕಲ್ಪ ಉತ್ಸವದಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಿದ್ದಾರೆ. ಫೋಟೋಗ್ರಫಿಯಲ್ಲಿ ಶೋಭಿತ್ ಗೌಡ ಮತ್ತು ದಾಮೋದರ ಹೆಗಡೆ ತಂಡ, ಟ್ರೀಸರ್‌ಹಂಟ್‌ನಲ್ಲಿ ಬಿ.ಎಲ್. ಸಜನ್ ಮತ್ತು ಸುಜಲ್ ಕೌರಿ ತಂಡ ದ್ವಿತೀಯ ಸ್ಥಾನ ಪಡೆದಿದೆ ಎಂದು ಪ್ರಾಚಾರ್ಯ ಡಾ. ಎಸ್.ವಿ. ಶೇಣ್ವಿ ತಿಳಿಸಿದ್ದಾರೆ.