

ವಿಜಯಪುರ: ನಗರದ ಬಿಎಲ್ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿಯರು ಕಲಬುರಗಿಯಲ್ಲಿ ಆ. 27 ರಂದು ನಡೆದ ರಾಜೀವ ಗಾಂಧಿ ಆರೋಗ್ಯ ವಿಾನಗಳ ವಿಶ್ವವಿದ್ಯಾಲಯ ಕಲಬುರಗಿ ವಲಯ ಮಟ್ಟದ ಮಹಿಳಾ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.
ಕಲಬುರಗಿಯ ಟಿಪ್ಪು ಸುಲ್ತಾನ್ ಯುನಾನಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಮಹಿಳಾ ಟೇಬಲ್ ಟೆನಿಸ್ ಪಂದ್ಯದಲ್ಲಿ ಎವಿಎಸ್ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿಯರಾದ ಪೃಥ್ವಿ ಸಿದರೆಡ್ಡಿ, ಶ್ರೇಯಾ ರೆಡ್ಡಿ ಮತ್ತು ಅರ್ಪಿತಾ ದೇಶಪಾಂಡೆ ದ್ವೀತಿಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ, ದೈಹಿಕ ನಿರ್ದೇಶಕ ಹಣಮಂತ ಪವಾರ, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.