ವಿವಿಧ ಕ್ರೀಡೆಗಳಲ್ಲಿ ಅಂತೋಣಿ ಶಾಲೆ ವಿದ್ಯಾರ್ಥಿಗಳ ಸಾಧನೆ

 ಹನೂರಿನಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆಗೈದ ಕೌದಳ್ಳಿ ಸಂತ ಅಂತೋಣಿ ಶಾಲೆ ವಿದ್ಯಾರ್ಥಿಗಳು.
ಹನೂರಿನಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆಗೈದ ಕೌದಳ್ಳಿ ಸಂತ ಅಂತೋಣಿ ಶಾಲೆ ವಿದ್ಯಾರ್ಥಿಗಳು.
Published on

ಹನೂರು: ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕೌದಳ್ಳಿ ಸಂತ ಅಂತೋಣಿ ಶಾಲೆ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಜಯ ಗಳಿಸಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ತಟ್ಟೆ ಎಸೆತ, ಉದ್ದ ಜಿಗಿತ ಹಾಗೂ ಗುಂಡು ಎಸೆತದಲ್ಲಿ ಭೂಮಿಕಾ ಪ್ರಥಮ, ಎತ್ತರ ಜಿಗಿತದಲ್ಲಿ ಅಂಜುಮ್ ಖಾನಂ ಪ್ರಥಮ, ಗುಂಡು, ತಟ್ಟೆ ಎಸೆತದಲ್ಲಿ ತರನಂ ಫರೀಯಾ, ಉದ್ದ ಜಿಗಿತದಲ್ಲಿ ಕಾವ್ಯಾ, 400 ಮೀಟರ್ ಓಟದಲ್ಲಿ ಮೇಘನಾ ಹಾಗೂ 600 ಮೀ ಓಟದಲ್ಲಿ ಕವಿತಾ ದ್ವಿತೀಯ ಹಾಗೂ ಥ್ರೋಬಾಲ್‌ನಲ್ಲೂ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದಿದೆ.

ಇನ್ನು ಬಾಲಕರ ವಿಭಾಗದಲ್ಲಿ ತಟ್ಟೆ ಎಸೆತದಲ್ಲಿ ಸಕ್ಲೈನ್ ಆಹಮದ್ ಹಾಗೂ ಎತ್ತರ ಜಿಗಿತದಲ್ಲಿ ಸೈಯದ್ ಹುಸೇನ್ ಪ್ರಥಮ ಸ್ಥಾನ ಪಡೆದಿದ್ದಾರೆ. ಸಾಧನೆಗೈದು ಶಾಲೆಗೆ ಕೀರ್ತಿ ತಂದು ಕೊಟ್ಟ ವಿದ್ಯಾರ್ಥಿಗಳನ್ನು ಸಂಸ್ಥೆಯ ವ್ಯವಸ್ಥಾಪಕ ಫಾದರ್ ಜಸ್ಟಿನ್, ಮುಖ್ಯ ಶಿಕ್ಷಕ ಕ್ಷೇವಿಯರ್ ಜಯಶೀಲನ್‌ಹಾಗೂ ದೈಹಿಕ ಶಿಕ್ಷನ ಶಿಕ್ಷಕ ಆರೋಗ್ಯಸ್ವಾಮಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net