ಅಣ್ಣಿಗೇರಿ ಕಾಲೇಜು ವಿದ್ಯಾರ್ಥಿನಿಯ ಸಾಧನೆ

12 Dwd 5 Chinmayi Anchatageri
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ವೈ.ಬಿ. ಅಣ್ಣಿಗೇರಿ ಪಿಯು ಕಾಲೇಜು ವಿದ್ಯಾರ್ಥಿನಿ ಚಿನ್ಮಯಿ ಸಂತೋಷ ಅಂಚಟಗೇರಿ 2024ರಲ್ಲಿ ನಡೆದ ಸಿಇಟಿಯಲ್ಲಿ ನಾಟಾ(ಅಗ್ರಿಕಲ್ಚರ್) ರಾಜ್ಯಕ್ಕೆ 23ನೇ ರ‍್ಯಾಂಕ್ ಪಡೆದಿದ್ದಾಳೆ. ಜೊತೆಗೆ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ 1,361 (ಆಲ್ ಇಂಡಿಯಾ) ರ‍್ಯಾಂಕ್ ಪಡೆದು ಸಂಸ್ಥೆಗೆ ಹೆಮ್ಮೆ ತಂದಿದ್ದಾಳೆ. ಸಾಧಕ ವಿದ್ಯಾರ್ಥಿನಿಯನ್ನು ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗೇಶ ಅಣ್ಣಿಗೇರಿ, ಪ್ರಾಚಾರ್ಯ ಮತ್ತು ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net