ಶಿಕ್ಷಕರ ಮಾರ್ಗದರ್ಶನದಿಂದ ಸಾಧನೆ ಸಾಧ್ಯ

Achievement is possible with the guidance of a teacher.
ವಿಜಯಪುರದ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಿ.ಜಿ. ಬಿದರಿ, ಪ್ರಕಾಶ ಗಣಿ, ನೀಲಮ್ಮ ಪೂಜಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಧೈರ್ಯ, ಸಹನೆ, ತಾಳ್ಮೆ, ಗುರಿಯ ಚಿಂತನೆಗಳತ್ತ ಆದರ್ಶ ಬೆಳೆಸಿಕೊಳ್ಳುವುದಕ್ಕೆ ಶಾಲಾ ಪರಿಸರ ಪ್ರಭಾವ ಬೀರುತ್ತದೆ. ಶಿಕ್ಷಕರ ಮಾರ್ಗದರ್ಶನದಿಂದ ಮಾತ್ರ ಗುರಿ ತಲುಪಲು ಸಾಧ್ಯ ಎಂದು ನಿವೃತ ಪ್ರಾಚಾರ್ಯ ಬಿ.ಜಿ. ಬಿದರಿ ಹೇಳಿದರು.

ನಗರದ ಶಾಂತವೀರ ನಗರದ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಭಗವಾನ್​ ಶ್ರೀ ರಾಮಕೃಷ್ಣ ಪರಮಹಂಸ 190ನೇ ಜನ್ಮದಿನದ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂದರಲ್ಲದೆ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಹುಮಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಪ್ರಾಚಾಯೆರ್ ನೀಲಮ್ಮ ಪೂಜಾರ ಹಾಗೂ ಆಡಳಿತಾಧಿಕಾರಿ ದಿಲೀಪಕುಮಾರ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಪ್ರಕಾಶ ಗಣಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಂದ ಗಾಯನ, ಭಾಷಣ ಅದ್ಭುತವಾಗಿ ಮೂಡಿಬಂದವು.

ಸಂಸ್ಥೆ ನಿರ್ದೇಶಕರಾದ ಎಂ.ಆರ್​. ತುಂಗಳ, ಎಸ್​.ಜಿ. ಗುಡದಿನ್ನಿ, ಜಿ.ಡಿ. ಚನ್ನಾಳ , ಶಿಕ್ಷಣ ಸಂಯೋಜಕಿ ಶಿವಲೀಲಾ ಪೂಜಾರಿ, ಮುಖ್ಯಶಿಕ್ಷಕಿ ಹರಜೊತ ಕೌರ ಜೊಗಿ, ಪ್ರಾಚಾರ್ಯ ಮಹೇಶ್ವರಪ್ಪ ಡಿ. ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net