ಉತ್ತಮ ಚಿಂತನೆಯಿಂದ ಸಾಧನೆ ಸಾಧ್ಯ: ಡಾ. ಪ್ರಭಾಕರ ಕೋರೆ

11mjr1
Published on

ಮಾಂಜರಿ: ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ ಎಂಬ ಉದ್ದೇ-ಶ-ದಿಂದ ಪಾಲಕರು ಕಷ್ಟಪಟ್ಟು ಮಕ್ಕಳಿಗೆ ಶಿಣ ಕೊಡಿಸುತ್ತಾರೆ. ಯಾರು ಅದನ್ನು ಅರಿತು ಜವಾಬ್ದಾರಿಯಿಂದ ಮುನ್ನಡೆಯುತ್ತಾರೋ ಅವರು ಉತ್ತಮ ಭವಿಷ್ಯ ಕಟ್ಟಿಕೊಳ್ಳುತ್ತಾರೆ ಎಂದು ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಸಮೀಪದ ಯಡ್ರಾವ ಗ್ರಾಮದಲ್ಲಿರುವ ಶಿವಶಕ್ತಿ ಶುಗರ್​ ಸಕ್ಕರೆ ಕಾರ್ಖಾನೆ ಕಾರ್ಯೇತ್ರದಲ್ಲಿರುವ ಕೆಎಲ್​ಇ ಶಿಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಶೇ.90 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿರಂತರ ಅಧ್ಯಯನ ಮತ್ತು ಉತ್ತಮ ಚಿಂತನೆಯಿಂದ ಮಾತ್ರ ಏನ-ನ್ನಾ-ದ-ರೂ ಸಾಧಿ-ಸ-ಲು ಸಾಧ್ಯ. ಸಾಧನೆಗೆ ಸಂಕಲ್ಪ ಮಾಡಬೇಕು. ಓದುವ ವಯಸ್ಸಿನಲ್ಲಿ ಯಾರು ಸುಖ ಅಪೇಕ್ಷೆ ಪಡುತ್ತಾರೋ ಅವರು ಎಂದಿಗೂ ಜೀವನದಲ್ಲಿ ಏಳಿಗೆ ಹೊಂದಲು ಸಾಧ್ಯವಿಲ್ಲ. ಕೇವಲ ಶಿಕ್ಷಕರ ಪಾಠ, ಪಾಲಕರ ಪ್ರೀತಿಯಿಂದಲೂ ಏನನ್ನು ಸಾಧಿಸಲಾಗದು. ಜಗತ್ತಿಗೆ ತನ್ನ ಇರುವಿಕೆ ಗೊತ್ತುಮಾಡಬೇಕಾದರೆ ಪ್ರಾಮಾಣಿಕ ಪ್ರಯತ್ನ ಅವಶ್ಯ ಎಂದು ಹೇಳಿದರು.

ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯ ಮಲ್ಲಿಕಾರ್ಜುನ ಕೋರೆ ಮಾತನಾಡಿ, ವಿದ್ಯಾರ್ಥಿಗಳು ಸೃಜನಾತ್ಮಕ ಚಿಂತನೆಯೊಂದಿಗೆ, ಪ್ರಯೋಗಶೀಲತೆಯಿಂದ ಅಧ್ಯಯನ ನಡೆಸಬೇಕು. ನಿತ್ಯ ಹೊಸ ಕೌಶಲ ಮೈಗೂಡಿಸಿಕೊಳ್ಳಬೇಕು. ಪದವಿ ಪಡೆದರಷ್ಟೇ ಸಾಲದು, ಸಮಾಜ ಸೇವೆಗೆ ಸಿದ್ಧರಿರಬೇಕು ಎಂದು ವಿದ್ಯಾರ್ಥಿಗಳಗೆ ತಿಳಿ ಹೇಳಿದರು.

ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳು ಶಿವಶಕ್ತಿ ಶುಗರ್​ ಸಕ್ಕರೆ ಕಾರ್ಖಾನೆ ಕಾರ್ಯೇತ್ರದಲ್ಲಿರುವ ಕೆಎಲ್​ಇ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆ ಎಸ್​ಎಸ್​ಎಲ್​ಸಿ ಪರೀೆಯಲ್ಲಿ -ಸಾ-ಧ-ನೆ ಮಾಡಿ-ದ ನಿರೀಾ ಪಡಲಾಳೆ ಶೇ.97.12 ಅಂಕ -ಪ-ಡೆ-ದು ಕ್ಲಸ್ಟರ್​ಮಟ್ಟದಲ್ಲಿ ಪ್ರಥಮ, ಲ-ಕ್ಷಿ$್ಮ ಚೌಗಲಾ, ಪ್ರೀತಿ ಮಾಳಿ ಶೇ.98.48 ಅಂಕ ಗಳಿಸಿ ಕ್ಲಸ್ಟರ್​ಮಟ್ಟದಲ್ಲಿ ದ್ವೀತಿಯ, ಸೃಷ್ಟಿ ಕಮತ್ಯಾನಟ್ಟಿ ಶೇ.94.72 ಅಂಕ ಗಳಿಸಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಮುಖ್ಯ ಶಿಕ್ಷ-ಕ ದಯಾನಂದ ಕಬ್ಬುರೆ, ಶಿಕ್ಷ-ಕ-ರಾದ ಶ್ರೀಧ-ರ ಕೋಳಿ, ಆದರ್ಶ ಮಗದುಮ್​, ರೇವತಿ ಉಪ್ಪಿ-ನ, ಸುಹಾಸ ಬನವಾಣೆ, ಆರ್​.ಪಿ.ಪಾಟೀ-ಲ, ಆರ್​.ಬಿ.ನೆಜಕ-ರ, -ವೈಶಾಲಿ ಹು-ಲ್ಲೆ-ಪ್ಪ--ಗೋ-ಳ, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಅಜಿತ್​ರಾವ್​ ದೇಸಾಯಿ, ಮಾಜಿ ನಿರ್ದೇಶಕ ಪ್ರಕಾಶ ಪಾಟೀ-ಲ ಸತ್ಯಪ್ಪ ಭೀಸ್ಟೆ, ಸದಾಶಿ-ವ ನಿಪ್ಪಾಣಿ, ಕಲ್ಲಪ್ಪ ನಿಂಗನೂರೆ ಇತರರಿದ್ದರು.

ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಣದ ಬಾಗಿಲು ತೆರೆದಿರುವ ಕೆಎಲ್​ಇ ಶಿಣ ಸಂಸ್ಥೆ ಸದಾ ಕಾಲಕ್ಕೂ ಸ್ಮರಣೀಯವಾಗಿದೆ. ಇಲ್ಲಿ ಓದುತ್ತಿರುವ ಎಲ್ಲರೂ ಭಾಗ್ಯಶಾಲಿಗಳು. ವಿದ್ಯಾರ್ಥಿಗಳು ಪದವಿ ಜತೆಗೆ ಕೌಶಲ ಅಳವಡಿಸಿಕೊಳ್ಳಬೇಕು. ಕೌಶಲವಿಲ್ಲದ ಪದವಿ ಕೇವಲ ಪ್ರಮಾಣ ಪತ್ರಕ್ಕಷ್ಟೇ ಸೀಮಿತ ಎಂಬುದನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಅದ-ಕ್ಕೆ ತಕ್ಕಂ-ತೆ ದಿಟ್ಟ ಹೆಜ್ಜೆ ಇಡಬೇಕು ಅಂದಾಗ ಸಾಧನೆ ಸಾಧ್ಯ. ಡಾ. ಪ್ರಭಾಕರ ಕೋರೆ ಕೆಎಲ್​ಇ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net