

ಲೋಕಾಪುರ: ಪ್ರತಿಯೊಬ್ಬರ ಜೀವನದಲ್ಲಿ ಕ್ರೀಡೆ ವಿಶೇಷ ಪಾತ್ರ ವಹಿಸುತ್ತಿದೆ ಎಂದು ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ಪ್ರಾಂಶುಪಾಲ ಪರಶುರಾಮ ವನಸಿ ಹೇಳಿದರು.
ಪಟ್ಟಣದ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯ ಕ್ರೀಡಾಕೂಟಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಬಹುದು. ಮನರಂಜನೆ ಮತ್ತು ದೈಹಿಕ ಚಟುವಟಿಕೆ ಅತ್ಯಂತ ಉಪಯುಕ್ತ ಎಂದು ತಿಳಿಸಿದರು. ಬಳಿಕ ಕ್ರೀಡಾ ಪ್ರತಿಜ್ಞೆ ಬೋಧಿಸಿದರು.
ಎಸ್.ಎಂ. ಕುರಣಿ ಮಾತನಾಡಿ, ವಿದ್ಯಾರ್ಥಿಗಳು ದೈಹಿಕವಾಗಿ ಸದೃಢವಾಗಲು ಪಾಠದ ಜೊತೆಗೆ ಆಟವು ಮುಖ್ಯ ಎಂದರು.
ವಿ.ಎಸ್. ಪಾಟೀಲ ಶಿಕ್ಷಕರು ಮಾತನಾಡಿ, ಜ್ಞಾನ, ಶ್ರದ್ಧೆ ಮತ್ತು ಶ್ರೇಷ್ಠತೆ ಉತ್ತೇಜಿಸುವುದು ಕ್ರೀಡೆಯ ಮೂಲಕ ಸಾಧ್ಯ ಎಂದರು.
ಮೂರನೇ ತರಗತಿ ವಿದ್ಯಾರ್ಥಿಗಳು ಕ್ರೀಡೆಯ ಕುರಿತು ನೃತ್ಯ ಪ್ರದರ್ಶಿಸಿದರು.
ವಿದ್ಯಾರ್ಥಿ ಪ್ರತಿನಿಧಿ ಮತ್ತು ಕ್ರೀಡಾಮಂತ್ರಿ ಮಧು ಪಾಟೀಲ ಕ್ರೀಡಾ ಜ್ಯೋತಿ ತಂದರು.
ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಕ್ಷೇತ್ರ ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಎಲ್. ಮಾಳೇದ, ಮಂಜುನಾಥ ಪಾಟೀಲ, ಎಸ್.ಎಂ. ಹುದ್ದಾರ, ಎಸ್.ಬಿ. ಪಾಟೀಲ, ವಿ.ವಿ. ಪಾಟೀಲ, ಎಸ್.ಎಂ. ಮಿರ್ಜಿ, ಕಟ್ಟಿಮನಿ, ಗಂಗಾಧರ ಗಾಣಗೇರ, ದೈಹಿಕ ಶಿಕ್ಷಕ ಅಡವೇಶ ಕಲ್ಲಿ, ಮಹಾಂತೇಶ ಉಳ್ಳಾಗಡ್ಡಿ ಗುರುಗಳ ನಿರ್ದೇಶನದ ಮೇರೆಗೆ ಎಲ್ಲ ತಂಡಗಳ ಪಥಸಂಚಲನ ನಡೆಸಲಾಯಿತು.
ಖುಷಿ ವನಸಿ ಸ್ವಾಗತಿಸಿ, ಪ್ರಥಮ ಮತ್ತು ಸಾತ್ವಿಕ್ ವಂದಿಸಿದರು.