

ತೇರದಾಳ: ಶರಣರ ತತ್ವಗಳಂತೆ ಬದುಕಿನಲ್ಲಿ ಸಾಧನೆಯ ಮೂಲಕ ಸಮಾನತೆಯ ಸಮಾಜವನ್ನು ನಿರ್ಮಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ ಎಂದು ರಬಕವಿಯ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಹನಗಂಡಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬದುಕಿನಲ್ಲಿ ನಡೆ, ನುಡಿ ಒಂದಾದರೇ ಸತ್ಯದ ಮೂಲಕ ಏನೇಲ್ಲವನ್ನೂ ಸಾಧಿಸಬಹುದು ಎಂಬುದನ್ನು ಅನೇಕ ಸಂತರು ತೋರಿಸಿಕೊಟ್ಟಿದ್ದಾರೆ. ಅಂತಹ ಬದುಕನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಖ್ಯಾತ ಸಾಹಿತಿ ಸಿದ್ಧರಾಜ ಪೂಜಾರಿ ಮಾತನಾಡಿದರು. ನಿಲೇಶ ದೇಸಾಯಿ, ಪ್ರಸನ್ನಕುಮಾರ ದೇಸಾಯಿ, ಸಹದೇವ ಯಳಕಾರ, ರಾವಸಾಬ ಗುಬಚೆ, ಸಹದೇವ ಧರೆನ್ನವರ, ಮಚೇಂದ್ರ ಗುಬಚೆ, ಪ್ರಕಾಶ ರೊಡನ್ನವರ, ಅಲ್ಲಪ್ಪ ಅರೇನಾಡ, ವಿಠ್ಠಲ ಯಳಕಾರ, ಅಜೀತ ಯಳಕಾರ, ವಿಠ್ಠಲ ಧರೆನ್ನವರ, ಅನೀಲ ಗುಬಚೆ ಮತ್ತಿತರರಿದ್ದಾರೆ.