ಛಲವಿದ್ದರೆ ಅಸಾಧ್ಯವಲ್ಲ ಸಾಧನೆ

31sor2
ಕೋಟಿಪುರದಲ್ಲಿ ಹಮ್ಮಿಕೊಂಡಿದ್ದ ಆನವಟ್ಟಿ ವಲಯ ಮಟ್ಟದ 17 ವರ್ಷದೊಳಗಿನ ಶಾಲಾ ಬಾಲಕ-ಬಾಲಕಿಯ ಕ್ರೀಡಾಕೂಟಕ್ಕೆ ಕಾರ್ತಿಕ್ ಎಂ. ಸಾಹುಕಾರ್ ಚಾಲನೆ ನೀಡಿದರು. ಲಿಂಗರಾಜ ಒಡೆಯರ್, ಸಂಪತ್ ಕುಮಾರ್, ಸರಿತಾ ಸಾಹುಕಾರ್, ಬಸವನಗೌಡ ಇತರರಿದ್ದರು.
Published on

ಸೊರಬ: ಛಲವಿದ್ದರೆ ಸಾಧನೆ ಎಂಬುದು ವಿದ್ಯಾರ್ಥಿಗಳಿಗೆ ಅಸಾಧ್ಯವಾದುದಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಠಿಣ ಪರಿಶ್ರಮದೊಂದಿಗೆ ಸಾಧನೆಯಡೆಗೆ ಹೆಜ್ಜೆ ಹಾಕಬೇಕು ಎಂದು ಎವರಾನ್ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ಅಧ್ಯಕ್ಷ ಕಾರ್ತಿಕ್ ಎಂ. ಸಾಹುಕಾರ್ ಹೇಳಿದರು.

ಗುರುವಾರ ತಾಲೂಕಿನ ಕೋಟಿಪುರದ ಎವರಾನ್ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ಸಾಯೋಗ ಹಾಗೂ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಆನವಟ್ಟಿ ವಲಯ ಮಟ್ಟದ 17 ವರ್ಷದೊಳಗಿಳನ ಶಾಲಾ ಬಾಲಕ-ಬಾಲಕಿಯ ಕ್ರೀಡಾಕೂಟದಲ್ಲಿ ಕ್ರೀಡಾ ಧ್ವಜರೋಹಣ ನೆರವೇರಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಅನೇಕ ಕ್ರೀಡಾಪಟು ರಾಜ್ಯ ಮತ್ತು ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವ ಸಾಮರ್ಥ್ಯ ಇರುವವರು ಇದ್ದಾರೆ. ಅಂತಹ ಕ್ರೀಡಾಪಟುಗಳನ್ನು ಗುರುತಿಸಲು ಕ್ರೀಡಾಕೂಟಗಳು ಅನುಕೂಲವಾಗಿದೆ. ಕ್ರೀಡೆಯಲ್ಲಿ ಗೆದ್ದವರು ಹಿಗ್ಗದೆ, ಸೋತವರು ಕುಗ್ಗದೆ, ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಅನೇಕ ಸಾಧಕರು ಸತತ ಪರಿಶ್ರಮದ ಮೂಲಕ ಗುರಿಯನ್ನು ಸಾಧಿಸಿದ್ದಾರೆ. ಅಂತಹವರನ್ನು ಆದರ್ಶನವನ್ನಾಗಿಸಿಕೊಂಡು ಸಾಧನೆಯ ಗುರಿಯನ್ನು ತಲುಪಬೇಕು ಎಂದು ತಿಳಿಸಿದರು.
ಕ್ರೀಡಾಕೂಟ ಉದ್ಘಾಟಿಸಿದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಲಿಂಗರಾಜ ಒಡೆಯರ್ ಮಾತನಾಡಿದರು. ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಸಂಪತ್ ಕುಮಾರ್ ಚಾಲನೆ ನೀಡಿದರು. ಶಾಲೆಯ ಮುಖ್ಯಸ್ಥೆ ಸರಿತಾ ಸಾಹುಕಾರ್ ಕ್ರೀಡಾಜ್ಯೋತಿ ಬೆಳಗಿದರು. ಕಸಾಪ ಆನವಟ್ಟಿ ಘಟಕದ ಅಧ್ಯಕ್ಷ ಬಸವನಗೌಡ, ಯುವಜನ ಬಳಗದ ಪ್ರಧಾನ ಕಾರ್ಯದರ್ಶಿ ಅಭಿಲಾಷ್ ಹುರಳಿಕೊಪ್ಪ, ಕರವೇ ಅಧ್ಯಕ್ಷ ಅಜಿತ್ ಕುಮಾರ್, ಶಿಕ್ಷಣ ಸಂಯೋಜಕ ಅರುಣ್ ಕುಮಾರ್, ಪತ್ರಕರ್ತ ಯು.ಎನ್.ಲಕ್ಷ್ಮೀಕಾಂತ್, ಪ್ರಮುಖರಾದ ಆರ್.ಸಿ.ಪಾಟೀಲ್, ಖಲಂದರ್ ಸಾಬ್, ಗಿರೀಶ್ ಮಲ್ಲಾಪುರ, ದೇವರಾಜ ಮೂಡಿ, ಸಿ.ಯಶವಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net