ಧನಾತ್ಮಕ ಶಕ್ತಿಯಿಂದ ಸಾಧನೆ ಸುಲಭ

SSLC
Published on

ಶಿರಹಟ್ಟಿ: ವಿದ್ಯಾರ್ಥಿಗಳಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಅವರ ಕಲಿಕೆಯನ್ನು ಸುಲಭಗೊಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ್ ಹೇಳಿದರು.

ಪಟ್ಟಣದ ಡಿ. ದೇವರಾಜ ಅರಸು ಭವನದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಗುರುವಾರ ಯುನಿವರ್ಸಲ್ ನಾಲೆಜ್ ಟ್ರಸ್ಟ್ ಹಾಗೂ ಗ್ರಾಮ ವಿಕಾಸ ಸೊಸೈಟಿ ಮಂಗಳೂರು ಇವರ ಸಹಯೋಗದಲ್ಲಿ ತಾಲೂಕಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸಾಮರ್ಥ್ಯಾಧಾರಿತ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಉಪನ್ಯಾಸಕಿ ಶಮಿ ಸಿರಿ ಮಾತನಾಡಿ, ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳು ಯೋಗ, ಧ್ಯಾನ ಒಳ್ಳೆಯ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು ಎಂದರು.

ಮಾಧ್ಯಮಿಕ ನೌಕರರ ಸಂಘದ ಜಿಲ್ಲಾಧ್ಯಕ್ಷರ ಎಂ.ಕೆ. ಲಮಾಣಿ ಮಾತನಾಡಿದರು. ಕಾಶಪ್ಪ ಸ್ವಾಮಿ, ಬಿ. ಎಸ್ ಭಜಂತ್ರಿ, ವೆಂಕಟೇಶ ಅರ್ಕಸಾಲಿ, ಉಮೇಶ ಹುಚ್ಚಯ್ಯನ ಮಠ, ವಾಸು ದೀಪಾಲಿ, ಸುನೀಲ ಲಮಾಣಿ, ಕೆ.ವಿ. ಗೌಡರ, ಎನ್.ಎಚ್. ಹಳ್ಳದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net