

ಹುಬ್ಬಳ್ಳಿ: ಎಲ್ಲವೂ ಕಾಠಿಣ್ಯವೆಂದು ಭಾವಿಸಿದರೆ ಏನನ್ನೂ ಗೆಲ್ಲಲು ಆಗುವುದಿಲ್ಲ. ನಿರಂತರ ಪರಿಶ್ರಮವಿದ್ದರೆ ಸಾಧನೆ ಕೈಗೆಟಕುಲಿದೆ ಎಂದು ಉದ್ಯಮಿ ರಮೇಶ ಮಹಾದೇವಪ್ಪನವರ ಅಭಿಪ್ರಾಯಪಟ್ಟರು.
ಇಲ್ಲಿಯ ಉಣಕಲ್ ಸಿದ್ದಕಲ್ಯಾಣನಗರದ ಜ್ಞಾನದ ಎಜುಕೇಷನ್ ಸೊಸೈಟಿಯ ತಕ್ಷ ಪ್ರಿ-ಸ್ಕೂಲ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 3ನೇ ವಾರ್ಷಿಕೋತ್ಸವ (ಬಾಂಧವ್ಯ) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವ ಅಗತ್ಯ ಇಂದಿನ ದಿನಗಳಲ್ಲಿದೆ. ಇಂಥ ವಾತಾವರಣ ತಕ್ಷ ಸ್ಕೂಲ್ ನಿರ್ಮಿಸಿದೆ. ಇತರರಿಗೂ ಮಾದರಿಯಾಗಿದೆ ಎಂದರು.
ಮಕ್ಕಳು ಯಕ್ಷಗಾನ ನೃತ್ಯದೊಂದಿಗೆ ಗಣ್ಯರನ್ನು ವೇದಿಕೆಗೆ ಕರೆತಂದರು. ವಿವಿಧ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ನಿವೃತ್ತ ಅಧಿಕಾರಿ ಹನುಮಂತಪ್ಪ ಕುಸುಗಲ್, ಹಿರಿಯ ಕಲಾವಿದ ಅಶೋಕ ಬೆಳ್ಳಿಗಟ್ಟಿ, ಶಾಲೆ ಚೇರ್ಮನ್ ಮನ್ಮೀತ್‌ಸಿಂಗ್ ಕೋಹ್ಲಿ, ಮುಖ್ಯಗುರುಮಾತೆ ಅಪರ್ಣಾ ಕೊಹ್ಲಿ, ಕಾರ್ಯದರ್ಶಿ ಸಾವಿತ್ರಿ ಕೋರಿಕೊಪ್ಪ, ಸಂಯೋಜಕಿ ಶ್ರೀದೇವಿ ಸುಗಂಧಿ, ಇತರರು ಇದ್ದರು.