

ಸುಂಟಿಕೊಪ್ಪ: ಕ್ರಿಕೆಟ್‌ನಲ್ಲಿ ಎಲ್ಲ ಬಾಲ್‌ಗಳಿಗೆ ಸಿಕ್ಸರ್ ಹೊಡೆಯಲು ಸಾಧ್ಯವಿಲ್ಲವೋ, ಅದೇ ರೀತಿ ಜೀವನದಲ್ಲೂ ಎಲ್ಲವನ್ನೂ ಸಾಧಿಸಲು ಮತ್ತು ಪಡೆಯಲು ಸಾಧ್ಯವಿಲ್ಲ. ಆದರೆ ತಾಳ್ಮೆಯ ಆಟವಾಡಿದರೆ ಪಂದ್ಯವನ್ನು ಗೆಲ್ಲಬಹುದು. ಶತಕವನ್ನು ಬಾರಿಸಬಹುದು ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಸುಂಟಿಕೊಪ್ಪ ಶಾಲಾ ಮೈದಾನದಲ್ಲಿ ಶನಿವಾರ ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ ಅಯೋಜಿಸಿರುವ 14 ವರ್ಷದ ಕ್ರಿಕೆಟ್ ಪಂದ್ಯಾವಳಿಯ 2ನೇ ದಿನದ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಜನಾಂಗ ಸಂಘಟಿತರಾಗಿ, ಪಕ್ಷಾತೀತ ನೆಲೆಗಟ್ಟಿನಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಕ್ರೀಡಾಕೂಟ ಮತ್ತು ದೇವರ ಜಾತ್ರೆಯಂತಹ ಕಾರ್ಯಕ್ರಮಗಳಿಗೆ ಸೀಮಿತಗೊಳ್ಳದೆ ಜನಾಂಗದ ಪ್ರತಿಭೆಗಳು ಹೊರಬರುವಂತೆ ಅವಕಾಶವನ್ನು ನೀಡುವಂತೆ ಅವರು ಕರೆ ನೀಡಿದರು. ಯುವ ನಾಯಕರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜಿಲ್ಲಾ ಪ್ರಶಸ್ತಿ ಪಡೆದುಕೊಂಡ ಪಿ.ವಿ.ಅಂತೋಣಿ ಅವರನ್ನು ಸನ್ಮಾನಿಸಿಸಲಾಯಿತು.
ಸಂತ ಅಂತೋಣಿ ಧರ್ಮಕೇಂದ್ರದ ಧರ್ಮಗುರು ರೇ.ಫಾ.ವಿಜಯಕುಮಾರ್, ಮಾದಾಪುರ ದೇವಾಲಯದ ಧರ್ಮಗುರು ಸೂಸೈರಾಜ್, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ, ಗ್ರಾ.ಪಂ.ಸದಸ್ಯ ರಫೀಕ್ ಖಾನ್, ಕಾರ್ಯಾಧ್ಯಕ್ಷರಾದ ವಿ.ಎ.ಲಾರೆನ್ಸ್, ಖಜಾಂಚಿ ಜೇಮ್ಸ್ ಡಿಸೋಜ, ಗ್ರೇಸಿ ಡೇವಿಡ್, ಸಿಸ್ಟರ್ ಜೊವಿಟಾವಾಝ್, ಜೋಕಿಂವಾಸ್, ಪಿಲಿಫ್, ಕ್ರೀಡಾಕೂಟದ ಅರ್ಥಿಕ ಸಮಿತಿ ಅಧ್ಯಕ್ಷ ಪಿ.ಎಂ.ಬಿಜು, ಪಿ.ಎಫ್.ಸಬಾಸ್ಟಿನ್, ಕ್ರೀಡಾಕೂಟ ಕಾರ್ಯದರ್ಶಿ ಅಂತೋಣಿ ಡಿಸೋಜ ಇತರರು ಇದ್ದರು.