ವಲಯಮಟ್ಟ ಕ್ರೀಡಾಕೂಟದಲ್ಲಿ ಸಾಧನೆ

Achievement in zonal level sports meet
Published on

ವಿಜಯಪುರ : ಇಲ್ಲಿನ ಶಾಂತವೀರ ನಗರದ ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಜಿಲ್ಲೆಯ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದಿದ್ದಾರೆ.ಜಿ.ಪಂ. ಹಾಗೂ ಉಪ ನಿರ್ದೇಶಕರ ಕಚೇರಿ (ಆಡಳಿತ) ಶಾಲಾ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟದ ಬಾಲಕರ 600 ಮೀ. ಓಟದಲ್ಲಿ ಮಯಾಂಕ ಇರಕಲ್​ ಪ್ರಥಮ ಸ್ಥಾನ, ಬಾಲಕಿಯರ 600 ಮೀ. ಓಟದಲ್ಲಿ ವಂಶಿಕಾ ಹಜೇರಿ ದ್ವೀತಿಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗುಂಪು ಆಟದ ಬಾಲಕರ ಕಬ್ಬಡಿ ಮತ್ತು ವಾಲಿಬಾಲ್​ನಲ್ಲಿ ದ್ವೀತಿಯ ಮತ್ತು ಬಾಲಕಿಯರು ಕಬ್ಬಡಿ ಮತ್ತು ವಾಲಿಬಾಲ್​ನಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಗಣಿ, ಆಡಳಿತಾಧಿಕಾರಿ ದೀಲೀಪಕುಮಾರ ಪೂಜಾರಿ, ಪ್ರಾಚಾಯೆರ್ ನೀಲಮ್ಮ ಪೂಜಾರ, ಶಿಕ್ಷಣ ಸಂಯೋಜಕಿ ಶಿವಲೀಲಾ ಪೂಜಾರಿ, ಮುಖ್ಯ ಗುರು ನವೀನಕುಮಾರ ಅಭಿನಂದನೆ ಸಲ್ಲಿಸಿದ್ದಾರೆ.

ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದ ವಿಜಯಪುರದ ರಾಮಕೃಷ್ಣ ವಿದ್ಯಾ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಾಲಾ ಸಿಬ್ಬಂದಿಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net