ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ

Achievement in Zonal Level Games
ಬಾಗಲಕೋಟೆ ಜಿಲ್ಲೆಯ ಇಳಕಲ್​ನಲ್ಲಿ ನಡೆದ ಕಲಬುರಗಿ ವಲಯ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆಗೈದ ವಿಜಯಪುರದ ಎವಿಎಸ್​ ಆಯುರ್ವೇದ ಕಾಲೇಜಿನ ಕ್ರೀಡಾಪಡುಗಳೊಂದಿಗೆ ಕಾಲೇಜಿನ ಸಿಬ್ಬಂದಿ ಇದ್ದಾರೆ.
Published on

ವಿಜಯಪುರ : ನಗರದ ಬಿಎಲ್​ಡಿಇ ಸಂಸ್ಥೆಯ ಎವಿಎಸ್​ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಇಳಕಲ್​ನಲ್ಲಿ ನಡೆದ ರಾಜೀವ ಗಾಂಧಿ ಆರೋಗ್ಯ ವಿಾನಗಳ ವಿಶ್ವವಿದ್ಯಾಲಯದ ಕಲಬುರಗಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದಿದ್ದಾರೆ.

ಸೋಮವಾರ ಇಳಕಲ್​ನ ವಿಜಯ ಮಹಾಂತೇಶ ಆಯುರ್ವೇದ ಮೆಡಿಕಲ್​ ಕಾಲೇಜಿನ ಆರ್​. ವೀರಮಣಿ ಕ್ರೀಡಾಂಗಣದಲ್ಲಿ ನಡೆದ ಥ್ರೋಬಾಲ್​ ಕ್ರೀಡಾಕೂಟದಲ್ಲಿ ಎವಿಎಸ್​ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಪುರುಷರ ತಂಡವು ಪ್ರಥಮ ಸ್ಥಾನ ಮತ್ತು ಅದೇ ವಿಭಾಗದಲ್ಲಿ ಮಹಿಳೆಯರ ತಂಡ ತೃತೀಯ ಸ್ಥಾನ ಪಡೆದಿದೆ. ಅಲ್ಲದೆ, ಟೆನಿಕ್ವಾಯ್ಟ್​ ಕ್ರೀಡೆಯಲ್ಲಿ ಮಹಿಳೆಯರ ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿದೆ.

ವಿದ್ಯಾರ್ಥಿಗಳ ಸಾಧನೆಗೆ ಬಿಎಲ್​ಡಿಇ ಸಂಸ್ಥೆಯ ಅಧ್ಯ ಎಂ.ಬಿ. ಪಾಟೀಲ, ನಿರ್ದೇಶಕ ಸುನೀಲಗೌಡ ಪಾಟೀಲ, ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ, ದೈಹಿಕ ನಿರ್ದೇಶಕ ಹಣಮಂತ ಪವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net