ಯೋಗದಲ್ಲಿ ವಿನಾಯಕ ಕೊಂಗಿಗೆ ಚಿನ್ನದ ಪದಕ

IMG-20251019-WA0018.jpg
Published on

ಹುಬ್ಬಳ್ಳಿ: ಯೋಗ ಫೆಡರೇಶನ್ ಆಫ್ ಇಂಡಿಯಾ ಅಡಿಯಲ್ಲಿ ಮೈಸೂರಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 50ನೇ ಹಿರಿಯ ರಾಷ್ಟ್ರೀಯ ಯೋಗ ಕ್ರೀಡಾ ಚಾಂಪಿಯನ್ ಶಿಪ್ ನಲ್ಲಿ ನಗರದ ಯೋಗಪಟು ವಿನಾಯಕ ಎಂ. ಕೊಂಗಿ ಚಿನ್ನದ ಪದಕ ಪಡೆದಿದ್ದಾರೆ.

ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಸಹಯೋಗದಲ್ಲಿ ಅ. 9ರಿಂದ 12ರ ವರೆಗೆ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿತ್ತು.
ವಿವಿಧ ರಾಜ್ಯದಿಂದ 45ಕ್ಕಿಂತ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.

45 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಹುಬ್ಬಳ್ಳಿಯ ಅಂತಾರಾಷ್ಟ್ರೀಯ ಯೋಗಪಟು ವಿನಾಯಕ ಪ್ರಥಮ ಸ್ಥಾನ ಪಡೆದಿದ್ದಾರೆ.

ಯೋಗ ಫೆಡರೇಶನ್ ಆಫ್ ಇಂಡಿಯಾ ಚೇರ್ಮನ್ ಅಶೋಕಕುಮಾರ ಅಗ್ರವಾಲ್ ಹಾಗೂ ಅಧ್ಯಕ್ಷೆ ಇಂಧು ಅಶೋಕಕುಮಾರ ಅಗ್ರವಾಲ್, ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಚೇರ್ಮನ್ ಗಂಗಾಧರಪ್ಪ, ಕಾರ್ಯದರ್ಶಿ ಎ. ನಟರಾಜ್ ಮತ್ತು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಹಾಗೂ ಚಿನ್ನದ ಪದಕ ನೀಡಿ ಕೊಂಗಿ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net