ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸಾಧನೆ

Achievement in talent fountain competition
ಮಹಾಲಿಂಗಪುರ ಕೆಎಲ್‌ಇ ಎಸ್‌ಸಿಪಿ ಶಾಲೆಯಲ್ಲಿ ನಡೆದ ಕೆಜಿಎಸ್ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಡಾ.ಎಸ್. ರಾಧಾಕೃಷ್ಣನ್ ಪ್ರಾಥಮಿಕ ಶಾಲೆ ಮಕ್ಕಳೊಂದಿಗೆ ಶಾಲೆ ಸಿಬ್ಬಂದಿ.
Published on

ಮಹಾಲಿಂಗಪುರ: ಪಟ್ಟಣದ ಡಾ.ಎಸ್. ರಾಧಾಕೃಷ್ಣನ್ ಪ್ರಾಥಮಿಕ ಶಾಲೆ ಮಕ್ಕಳು ಇತ್ತೀಚೆಗೆ ಸ್ಥಳೀಯ ಕೆಎಲ್‌ಇ ಎಸ್‌ಸಿಪಿ ಶಾಲೆಯಲ್ಲಿ ನಡೆದ ಕೆಜಿಎಸ್ ವಲಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

1 ರಿಂದ 4ನೇ ತರಗತಿ ವಿಭಾಗದಲ್ಲಿ ಧಾರ್ಮಿಕ ಪಠಣ ಅರೇಬಿಕ್ ಸ್ಪರ್ಧೆಯಲ್ಲಿ ಮೀನಾಮುಜಲ್ವಾ ಇನಾಮದಾರ ಪ್ರಥಮ, ಛದ್ಮವೇಷದಲ್ಲಿ ಬಸವರಾಜ ದೊಡ್ಡಟ್ಟಿ ಪ್ರಥಮ, ಕಥೆ ಹೇಳುವ ಸ್ಪರ್ಧೆಯಲ್ಲಿ ವಿರಾಟ ಭದ್ರಶೆಟ್ಟಿ ಪ್ರಥಮ, ಚಿತ್ರಕಲೆಯಲ್ಲಿ ಆತ್ೀ ಸೌದಾಗರ ಪ್ರಥಮ, ಕ್ಲೇ ಮಾಡ್ಲಿಂಗ್‌ನಲ್ಲಿ ರಾಜೇಶ ದೊಡ್ಡಟ್ಟಿ ಪ್ರಥಮ ಸ್ಥಾನ ಗಳಿಸಿದ್ದಾರೆ.

5 ರಿಂದ 7ನೇ ತರಗತಿ ವಿಭಾಗದಲ್ಲಿ ಧಾರ್ಮಿಕ ಪಠಣ ಸಂಸ್ಕೃತದಲ್ಲಿ ಮಹಾಲಿಂಗಪ್ಪ ಭದ್ರಶೆಟ್ಟಿ ಪ್ರಥಮ, ಧಾರ್ಮಿಕ ಪಠಣ ಅರೇಬಿಕ್‌ದಲ್ಲಿ ರುಮಾನ ಮಾಲ್ದಾರ್ ಪ್ರಥಮ, ದೇಶ ಭಕ್ತಿಗೀತೆಯಲ್ಲಿ ಮಹಾಲಿಂಗಪ್ಪ ಭದ್ರಶೆಟ್ಟಿ ಪ್ರಥಮ, ಪ್ರಬಂಧ ಸ್ಪರ್ಧೆ ಹಾಗೂ ಕಥೆ ಹೇಳುವ ಸ್ಪರ್ಧೆಯಲ್ಲಿ ದಸ್ತಗೀರಸಾಬ ಚಿನಗುಂಡಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಸ್.ಎಂ. ಉಳ್ಳೇಗಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net