

ಕಾಸರಗೋಡು: ಮಲೇಷ್ಯಾದ ಕೌಲಲಾಂಪುರದಲ್ಲಿ ನಡೆದ ಸ್ಪೀಡ್ ಪವರ್ ಓಪನ್ ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಪಿ.ಮಧುಶ್ರೀ ಮಿತ್ರ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ.
ಹಿರಿಯ ಬಾಲಕಿಯರ ಪೂಮ್ಸಾ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಪ್ರಶಸ್ತಿ ಗಳಿಸಿದ್ದಾರೆ. ಮಧುಶ್ರೀ ಮಿತ್ರ ಪ್ರಸಕ್ತ ಬೆಂಗಳೂರಿನ ಟೆಕ್‌ಸಿಸ್ಟಮ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದಾರೆ. ಕಾಸರಗೋಡು ಜಿಲ್ಲೆಯ ಚೆರುವತ್ತೂರಿನ ಗ್ರ್ಯಾಂಡ್ ಮಾಸ್ಟರ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಅನಿಲ್ ಮಾಸ್ಟರ್ ಅವರಿಂದ ಟೇಕ್ವಾಂಡೋದಲ್ಲಿ ತರಬೇತಿ ಪಡೆದಿದ್ದಾರೆ. ಬದಿಯಡ್ಕದ ಮಾಸ್ಟರ್ ಆನಂದ್ ಅವರ ಬಳಿ 9ನೇ ವಯಸ್ಸಿನಿಂದ ಕರಾಟೆ ತರಬೇತಿ ಆರಂಭಿಸಿದ್ದು, ಎರಡನೇ ಪದವಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ. ಪೆರ್ಲದ ಪರ್ತಜೆ ವೆಂಕಟರಾಜಮಿತ್ರ-ಸುಮಿತ್ರಾ ದಂಪತಿ ಪುತ್ರಿ ಹಾಗೂ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಹಳೇ ವಿದ್ಯಾರ್ಥಿಯಾಗಿದ್ದಾರೆ.