

ಸಿದ್ದಾಪುರ: ಬೆಂಗಳೂರಿನ ವೈಟ್ ಫೆದರ್ ಹಾಲ್ನಲ್ಲಿ ಚೆನ್ನೈನ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನಿಂದ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪಟ್ಟಣದ ಐಡಿಯಲ್ ಪ್ಲೇ ಅಬಾಕಸ್ ಸೆಂಟರ್ (ಸಿದ್ಧಿವಿನಾಯಕ ಸ್ಕೂಲ್)ನ 23 ಮಕ್ಕಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಶ್ರೇಯಾ ಎಚ್. ಕಿಲಾರಗೆ ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿ, ಗಾನವಿ ಜಿ. ಅಪ್ಪಿನ್ಬೈಲ್ (ಪ್ರಥಮ), ಭರತ್ ಬಿ. ಪಟೇಲ್ (ದ್ವಿತೀಯ), ಆರುಷ್ ಎ. ನಾಯ್ಕ, ನಮನ್ ವಿ. ಅಂಬಿಗ, ನಿಶ್ಮಿತಾ ಎಂ. ನಾಯ್ಕ, ವಿವಾನ್ ಯು. ಖಾರ್ವಿ, ಯಶಸ್ ಬಿ. ಪಟೇಲ್, ಋಷಭ್ ಸಿ.ಎಸ್., ದಿಗಂತ್ ಬಾರ್ದೇಶ್ಕರ್ (ತೃತೀಯ), ಅವನೀಶ ಆರ್. ಹೆಗಡೆ, ಎಂ. ವಿರಾಟ್, ಮನಿಶಾ ಎಂ. ನಾಯ್ಕ, ಅನುಷ್ಕಾ ಎ. ನಾಯ್ಕ, ಧನುಷ್ ಪಿ. ನಾಯ್ಕ, ಅಥರ್ವ ಎನ್. ಶೇಟ್, ಚರಣ ವೈ.ಕೆ. (ನಾಲ್ಕನೇ ಸ್ಥಾನ), ನಿರ್ವಿಘ್ನ ವಿ. ನಾಯಕ್, ಪವನ್ ಎಸ್. ಅಂಬಿಗ, ದಕ್ಷ್ ಠಾಕೂರ್, ರಿಷಿತ್, ದೀಪಕ್ ಡಿ. ಪಟೇಲ್ (5ನೇ ಸ್ಥಾನ), ರೋಹಿತ್ ಎಸ್. ಶೇಟ್ (ಆನ್ಲೈನ್) ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.
ಸಿದ್ದಾಪುರ ಐಡಿಯಲ್ ಪ್ಲೇ ಅಬಾಕಸ್ ಸೆಂಟರ್ನ ಗುರುಮೂರ್ತಿ ಆರ್. ನಾಯ್ಕ ಬೆಸ್ಟ್ ಫ್ರಾಂಚೈಸಿ ಅವಾರ್ಡ್ ಹಾಗೂ ವಿನೋದಾ ಜಿ. ನಾಯ್ಕ ಬೆಸ್ಟ್ ಟೀಚರ್ ಅವಾರ್ಡ್ ಪಡೆದುಕೊಂಡಿದ್ದಾರೆ.