ಮೈಸೂರು ದಸರಾ ಟೆಕ್ವಾಂಡೋದಲ್ಲಿ ಸಾಧನೆ

16 Dwd 1 - Copy
Published on

ಧಾರವಾಡ: ಮೈಸೂರಿನಲ್ಲಿ ನಡೆದ ದಸರಾ ಅಂತರ ವಿಭಾಗ ಮಟ್ಟದ ಟೆಕ್ವಾಂಡೋ ಕ್ರೀಡಾಕೂಟದಲ್ಲಿ ಬೆಳಗಾವಿ ವಿಭಾಗ ಮಟ್ಟದಿಂದ ಭಾಗವಹಿಸಿದ್ದ ಜಿಲ್ಲಾ ಟೆಕ್ವಾಂಡೋ ಸಂಸ್ಥೆಯ 12 ಕ್ರೀಡಾಪಟುಗಳು ಪದಕ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಸ್ಪೂರ್ತಿ ನಿಕ್ಕಂ ಚಿನ್ನದ ಪದಕ (46 ಕೆಜಿ ವಿಭಾಗ) ಅದಿತಿ ಪರಪ್ಪ ಕ್ಷಾತ್ರತೇಜ ಚಿನ್ನ (50 ಕೆಜಿ ವಿಭಾಗ), ಸಂಜನಾ ಬಳ್ಳಾರಿ ಚಿನ್ನ (46 ಕೆಜಿ ವಿಭಾಗ), ದಾಮಿನಿ ಬನ್ನಿಕೊಪ್ಪ ಬೆಳ್ಳಿ (70 ಕೆಜಿ ವಿಭಾಗ), ಜಬೀನಾ ಬೇಗಂ ಜಹಗೀರದಾರ ಕಂಚು (42 ಕೆಜಿ ವಿಭಾಗ), ಭೂಮಿಕಾ ಬನ್ನಿಕೊಪ್ಪ ಕಂಚು (65 ಕೆಜಿ ವಿಭಾಗ) ಪದಕ ಗಳಿಸಿದ್ದಾರೆ.
ಬಾಲಕರ ವಿಭಾಗದಲ್ಲಿ ಸಾಯಿಪ್ರಸಾದ ಪರಪ್ಪ ಕ್ಷಾತ್ರತೇಜ ಚಿನ್ನ (50 ಕೆಜಿ ವಿಭಾಗ), ಸತ್ಪಾಲ ಪಾಮಾಡಿ ಚಿನ್ನ (69 ಕೆಜಿ ವಿಭಾಗ), ದಿತೀಶ ಶೆಟ್ಟಿ ಚಿನ್ನ (82 ಕೆಜಿ ವಿಭಾಗ), ನಿರಂಜನ ಆನಿಕಿವಿ ಬೆಳ್ಳಿ (76 ಕೆಜಿ ವಿಭಾಗ), ಮಹಮ್ಮದಸಾದ ಕೊಳಚಿ ಕಂಚು (45 ಕೆಜಿ ವಿಭಾಗ), ನಮಿತಕುಮಾರ ಸುಣಗಾರ ಕಂಚು (62 ಕೆಜಿ ವಿಭಾಗ) ಪದಕ ಗಳಿಸಿದ್ದಾರೆ.
ಕ್ರೀಡಾಪಟುಗಳ ಸಾಧನೆಯನ್ನು ಮೈಸೂರು ದಸರಾ ಟೆಕ್ವಾಂಡೊ ಕ್ರೀಡಾ ಸಮಿತಿ ಅಧ್ಯಕ್ಷ ಪ್ರಕಾಶ, ಜಿಲ್ಲಾ ಟೆಕ್ವಾಂಡೊ ಸಂಸ್ಥೆಯ ಅಧ್ಯಕ್ಷ ಆನಂದ ಕುಲಕರ್ಣಿ, ಉಪಾಧ್ಯಕ್ಷ ಬಿ.ಎಸ್. ತಾಳಿಕೋಟಿ, ಮುಖ್ಯ ಕಾರ್ಯದರ್ಶಿ ಅಂಜಲಿ ಪರಪ್ಪ ಕ್ಷಾತ್ರತೇಜ, ಹಿರಿಯ ತರಬೇತುದಾರ ಪರಪ್ಪ ಎಸ್.ಕೆ., ಸಹಾಯಕ ತರಬೇತುದಾರ ಆನಂದ ಕಿಟದಾಳ ಹಾಗೂ ಪದಾಽಕಾರಿಗಳು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net