

ಭಟ್ಕಳ: ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ನಡೆಸಿದ 2023-24ನೇ ಸಾಲಿನ ವಿಶೇಷ ಸಂಗೀತ ನೃತ್ಯ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಭಟ್ಕಳದ ಝೇಂಕಾರ ಭರತನಾಟ್ಯ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಉತ್ತಮ ಫಲಿತಾಂಶ ಪಡೆದಿದ್ದಾರೆ.
ನವ್ಯಾ ಸತೀಶ ಭಂಡಾರಿ (ಶೇ. 74.20), ಪ್ರಸಿದ್ಧಿ ಉದಯ ಪೈ (ಶೇ. 72.80), ಧನಲಕ್ಷ್ಮೀ ರಾಮಚಂದ್ರ ಮೊಗೇರ (ಶೇ.71.40), ಭವಾನಿ ಮಂಜುನಾಥ ಮೊಗೇರ (ಶೇ. 67.80) ನೃತ್ಯ ವಿದುಷಿ ಪಟ್ಟಕ್ಕೆ ಭಾಜನರಾಗಿದ್ದಾರೆ. ಜೂನಿಯರ್ ವಿಭಾಗದಲ್ಲಿ ದಿಶಾ ಜಿ. (ಶೇ.97), ಪ್ರೇರಣಾ ಪ್ರಭು (ಶೇ.94), ಪೂರ್ವಿ ಪ್ರಭು (ಶೇ.90.25) ನಿಧಿ ದೇವಾಡಿಗ (ಶೇ. 82.50), ರಿತಿಕಾ ಮೇಸ್ತ (ಶೇ.78.75), ವೇದಾ ನಾಯ್ಕ ಶೇ. 73.50 ಅಂಕ ಪಡೆಯುವ ಮೂಲಕ ಝೇಂಕಾರ್ ಸಂಸ್ಥೆ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ, ಹಾಗೂ ಆಡಳಿತ ಮಂಡಳಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.