

ಚಿಕ್ಕೋಡಿ: ಬೆಳಗಾವಿ ನಗರದಲ್ಲಿ ಈಚೆಗೆ ಜರುಗಿದ ರಾಜ್ಯಮಟ್ಟದ ಎರಡನೇ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಸಿಎಲ್‌ಇ ಶಿಕ್ಷಣ ಸಂಸ್ಥೆಯ ಕೆ.ಕೆ. ಆಂಗ್ಲ ಮಾಧ್ಯಮ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳು ಹಲವು ಪದಕಗಳನ್ನು ಪಡೆದು ಅಮೋಘ ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯೆ ಸ್ಮಿತಾ ಎನ್.ಶಿಂಧೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳಾದ ಗ್ಯಾನ್ ಚೊನ್ನದ್ (ಫೈಟಿಂಗ್-ಪ್ರಥಮ), ರಚನಾ ಎಸ್.ಎಸ್. (ಕುಮಿತಿ-ಪ್ರಥಮ ಹಾಗೂ ಕಾಠಾದಲ್ಲಿ-ತೃತೀಯ), ಕಲ್ಮೇಶ ದ್ರಾಕ್ಷಿ , ಸಾಮ್ರಾಟ ಘೋಸರವಾಡೆ, ಪ್ರಣಮ ಹಿರೇಮಠ, ಶಂಕರ ಸಾವಂತ, ಆತೀಶ್ ಉದೋಶಿ, ಮೊಹಮ್ಮದ್ ಫುರ್ಖಾನ್ ಜಮಾದಾರ್ (ಫೈಟಿಂಗ್-ದ್ವಿತೀಯ), ಆದಿತ್ಯ ಮಾಳಿ (ಫೈಟಿಂಗ್-ತೃತೀಯ), ಆಯುಷ್ ಮಾಯಪ್ಪಗೋಳ, ಸಂಸ್ಕಾರ ಮಾಳಿ, ಕೀರ್ತಿ ಕಾಂಬಳೆ, ದ್ರುವಿ ಮುಸಂಡಿ ಕಾಠಾದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 2 ಬಂಗಾರ, 6 ಬೆಳ್ಳಿ, 6 ಕಂಚು ಪದಕ ಪಡೆದಿದ್ದಾರೆ.