

ಮುದ್ದೇಬಿಹಾಳ: ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಟ್ಟಣದ ಬಿ.ಎಸ್. ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳಾದ ವಿಕ್ರಾಂತ್ ಶಾರದಳ್ಳಿ ಹಾಗೂ ಶಕುಂತಲಾ ಶಾರದಳ್ಳಿ ಬಂಗಾರ ಮತ್ತು ಕಂಚಿನ ಪದಕ ಪಡೆದು ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಏಳು ವರ್ಷದ 20 ಕೆಜಿ ಕುಮಿಟೆ (ಫೈಟ್) ವಿಭಾಗದಲ್ಲಿ ಬಂಗಾರದ ಪದಕವನ್ನು ವಿಕ್ರಾಂತ ಶಾರದಳ್ಳಿ ಪಡೆದರು. 10 ವರ್ಷದ ಬಾಲಕಿಯರ ಕಥ (ಆಕ್ಷನ್) ವಿಭಾಗದಲ್ಲಿ ಕಂಚಿನ ಪದಕವನ್ನು ಶಕುಂತಲಾ ಶಾರದಳ್ಳಿ ಪಡೆದರು. ತರಬೇತಿದಾರ ಶಿವಕುಮಾರ ಶಾರದಳ್ಳಿ ಹಾಗೂ ಟೀಮ್ ಮ್ಯಾನೇಜರ್ ಲಕ್ಷ್ಮಣ ಫಿರಂಗಿ ಮಕ್ಕಳಿಗೆ ಮಾರ್ಗದರ್ಶಕರಾಗಿದ್ದರು.
ಬಳ್ಳಾರಿ ವಾಲ್ಮೀಕಿ ಭವನದಲ್ಲಿ ನಡೆದ ಟ್ರೆಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿ ಕರ್ನಾಟಕ ಮತ್ತು ಕರ್ಮಯೋಗ ಟ್ರಸ್ಟ್ ಕರ್ನಾಟಕ ಮತ್ತು ಡಬ್ಲುೃಟಿಎಸ್‌ಕೆ ಆಶ್ರಯದಲ್ಲಿ ಪಂದ್ಯಾವಳಿ ನಡೆಯಿತು.