

ವಿರಾಜಪೇಟೆ: ಸಮರ ಕಲೆಯ ವಿವಿಧ ಪ್ರಕಾರಗಳಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಜಿಲ್ಲೆ ಮತ್ತು ತರಬೇತಿ ಶಾಲೆಗೆ ಕೀರ್ತಿ ತಂದಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನ ಶ್ರೀ ಕೃಷ್ಣ ಕೌಂಡರ್ ಸಭಾಂಗಣದಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಮೆಬುಕನ್ ಗೋಜೂ ರ‌್ಯೂ ಕರಾಟೆ ಡು ಇಂಡಿಯಾ ವತಿಯಿಂದ ಆಯೋಜಿಸಿದ್ದ 17ನೇ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಜಿಲ್ಲೆಯ ಗೋಜೂ ರ‌್ಯೂ ತರಬೇತಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಕತಾ, ಕುಮಿತೆ ಮತ್ತು ಟೀಂ ಕತಾ ವಿಭಾಗಗಳಲ್ಲಿ ಪಂದ್ಯಾಟಗಳು ನಡೆದು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದು ಕೊಂಡಿದ್ದಾರೆ. ಶಿಕ್ಷಕ ಸೆನ್‌ಸಾಯಿ ಎಂ.ಬಿ.ಚಂದ್ರನ್ ವಿದ್ಯಾರ್ಥಿಗಳ ತರಬೇತುದಾರರಾಗಿದ್ದಾರೆ.