ವಿರಾಜಪೇಟೆ: ಮುಂಬೈ ಸೋಮಯ್ಯ ವಿದ್ಯಾ ವಿಹಾರ್ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ 43ನೇ ಇಂಡಿಯಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ. ಕೊಡಗು ಜಿಲ್ಲೆಯ ಮುಲ್ಲೆರ ಪೊನ್ನಮ್ಮ ಪೂವಣ್ಣ 100 ಮೀ. ಮತ್ತು 200 ಮೀ. ಓಟ, ಶಾಟ್‌ಪುಟ್, ಜಾವಲಿನ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಜಿಲ್ಲೆಯ ಮತ್ತೊಬ್ಬ ಕ್ರೀಡಾಪಟು ಪಾಸುರ ಇಂದಿರಾ ಮುತ್ತಣ್ಣ ಅವರು ಶಾಟ್‌ಪುಟ್ ರಿಲೇ ಪ್ರಥಮ, ಜಾವಲಿನ್ ಮತ್ತು ಡಿಸ್ಕಸ್ ಥ್ರೋನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.